google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಪ್ರತಿಷ್ಠಿತ ಪದವೀಧರರ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಪ್ರಸಕ್ತ ಸಾಲಿನ 49ನೇ ವಾರ್ಷಿಕ ಮಹಾಸಭೆಯನ್ನು ಸೆ. 21ರ ನಾಳೆ ಸಂಜೆ ೬ಗಂಟೆಗೆ ಸವಳಂಗ ರಸ್ತೆಯಲ್ಲಿರು ಸರ್ಜಿ ಕನ್ವೆನ್‌ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1971 ಸೆ. 27ರಂದು ಆರಂಭವಾದ ಸಂಘ ಯಶಸ್ವಿಯಾಗಿ 53 ವರ್ಷ ಪೂರೈಸಿ, ರಾಜ್ಯ ಮತ್ತು ಜಿಲ್ಲಾ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಪಡೆಯುವುದರೊಂದಿಗೆ ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಿ ಶಿವಮೊಗ್ಗ ನಗರದ ಪ್ರತಿಷ್ಠಿತ ಸಹಕಾರ ಸಂಘವಾಗಿದೆ ಎಂದರು.

2024ರ ಮಾರ್ಚ್ ಅಂತ್ಯಕ್ಕೆ ಪ್ರಗತಿಗೆ ಹೋಲಿಸಿದಾಗ ಸದಸ್ಯರ ಸಂಖ್ಯೆ 7081 ಆಗಿದ್ದು, 288.82 ಲಕ್ಷಗಳ ಷೇರು ಬಂಡವಾಳವನ್ನು ಹೊಂದಿದ್ದು, ರೂ. 65.48 ಕೋಟಿಗಳ ನಿವ್ವಳ ಠೇವಣಿ ಸಂಗ್ರಹಿಸಿ, 54.73 ಕೋಟಿ ರೂ.ಗಳ ಸಾಲ ನೀಡಲಾಗಿದೆ. ರೂ. 214.49 ಕೋಟಿ ಒಟ್ಟು ದಾಖಲೆಯ ವಹಿವಾಟು ನಡೆಸಿ , ರೂ.7.41 ಕೋಟಿ ರೂಗಳ ಒಟ್ಟು ಆದಾಯ ಗಳಿಸಿ ರೂ.1,29,16,136-25 ಗಳ ದಾಖಲೆ ನಿವ್ವಳ ಲಾಭ ಗಳಿಸಿದೆ ಹಾಗೂ ಸತತವಾಗಿ ಕಳೆದ 6 ವರ್ಷಗಳಿಂದ ರೂ. 1 ಕೋಟಿಗೂ ಅಧಿಕ ಲಾಭವನ್ನು ಗಳಿಸಿದೆ ಎಂದರು.

ಸಂಘದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಕೃಷಿ ನಗರದಲ್ಲಿ ಸಂಘದ ಹೆಸರಿಗೆ ಖರೀದಿಸಿರುವ ನಿವೇಶನದಲ್ಲಿ ಸಂಘದ ನೂತನ ಶಾಖಾ ಕಟ್ಟಡದ ನಾಲ್ಕನೇ ಮಹಡಿ ಆರ್.ಸಿ.ಸಿ. ಕೆಲಸ ಮುಗಿದಿದ್ದು, ಮಿನಿ ಸಭಾಂಗಣ ಮಹಡಿಯಲ್ಲಿನ ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿದೆ. ಸಂಘದ ಶಾಖಾ ಕಟ್ಟಡದಲ್ಲಿ ಸೇಫ್ ಡೆಪಾಸಿಟ್ ಲಾಕರ್‌ಗಳನ್ನು ಅಳವಡಿಸಲಾಗುತ್ತಿದ್ದು 2023ರ ಸೆ.೨೪ರಿಂದ ಲಾಕರ್ ಬುಕ್ಕಿಂಗ್ ಆರಂಭವಾಗಿದೆ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ನೂತನ ಶಾಖಾ ಕಟ್ಟಡದ ಲಾಕರ್ ಪ್ಲಾಜವನ್ನು ಉದ್ಘಾಟಿಸುವರು. ಸ್ಮರಣ ಸಂಚಿಕೆಯನ್ನು ಸಂಸದ ಬಿ.ವೈ.ರಾಘವೇಂದ್ರ ಬಿಡುಗಡೆ ಮಾಡುವರು. ಮುಖ್ಯ ಅತಿಥಿಯಾಗಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯನಾಯ್ಕ್, ಎಸ್.ಎಲ್. ಭೋಜೇಗೌಡ, ಮಂಜುನಾಥ್ ಭಂಡಾರಿ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ್‌ಗೌಡ, ಸಾಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸಹಕಾರ ಸಂಘಗಳ ಉಪನಿಬಂಧಕ ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಆರ್.ತೇಜೋಮೂರ್ತಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್ ಆಗಮಿಸಲಿದ್ದಾರೆ ಎಂದರು.

ಇದಕ್ಕೂ ಮುನ್ನ ಸಂಜೆ ೫.೩೦ರಿಂದ ದೀಪಿಕಾ ಶ್ರೀಕಾಂತ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಜೋಗದ ವೀರಪ್ಪ, ಪಿ.ರುದ್ರೇಶ್, ಡಾ.ಎಸ್.ಹೆಚ್.ಪ್ರಸನ್ನ, ಹೆಚ್.ಸಿ.ಸುರೇಶ್, ಎಸ್.ಕೆ.ಕೃಷ್ಣಮೂರ್ತಿ, ಡಾ.ಯು.ಚಂದ್ರಶೇಖರಪ್ಪ, ಯು.ರಮ್ಯಾ, ಡಿ.ಎಸ್. ಭುವನೇಶ್ವರಿ, ಯು.ಶಿವಾನಂದ, ಪ್ರಭಾರ ಕಾರ್ಯದರ್ಶಿ ಬಿ.ಎಸ್. ಕವಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *