
ಗೋಕರ್ಣ :- ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದ ತಮಿಳುನಾಡು ಮೂಲದ ತಿರುಚಿ ವೈದ್ಯಕೀಯ ಕಾಲೇಜಿನ ಕಾಂಝಿಮೋಳಿ ಮತ್ತು ಸಿಂಧುಜಾ ಎಂಬ ಇಬ್ಬರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದು ಗೋಕರ್ಣದ ಜಟಾಯು ತೀರ್ಥದಲ್ಲಿ ಸಮುದ್ರದಲ್ಲಿ ಈಜಲು ಇಳಿದಿದ್ದರು. ಆದರೆ ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ.
ವಿದ್ಯಾರ್ಥಿನಿಯರು ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅವರ ಸಹಾಯಕ್ಕೆ ಧಾವಿಸಿದರು. ಯಾವುದೇ ಸಮುದ್ರದ ಅಲೆಗಳ ಮೇಲೆ ರಕ್ಷಿಸಲು ಸಾಧ್ಯವಾಗಿಲ್ಲ. ಮೃತರು ತಮಿಳುನಾಡಿನ ತಿರುಚ್ಚಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಅಂತಿಮ ವರ್ಷದ ಅಧ್ಯಯನವನ್ನು ಮುಗಿಸಿ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಮೃತರು ಮತ್ತು ಇತರ ಇಬ್ಬರು ಸಮುದ್ರದ ದಡದಲ್ಲಿದ್ದ ಕಲ್ಲುಗಳ ಮೇಲೆ ಕುಳಿತಿದ್ದಾಗ ಇಬ್ಬರೂ ಜರಿಬಿದ್ದು ಸಮುದ್ರಕ್ಕೆ ಬಿದ್ದು ಕೊಚ್ಚಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
