google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರಾಜೇಂದ್ರ ನಗರದ ಪ್ರತಿಷ್ಠಿತ ನಟನಂ ಬಾಲ ನಾಟ್ಯ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್. ಕೇಶವಕುಮಾರ್ ಪಿಳ್ಳೈ ಅವರ ನೇತೃತ್ವದಲ್ಲಿ ಫೆ. 10ರ ಸೋಮವಾರ ಸಂಜೆ 5ಕ್ಕೆ ಕುವೆಂಪುರಂಗ ಮಂದಿರದಲ್ಲಿ ನಟನಂ ಕಲಾ ಸಂಸ್ಕೃತಿ ಉತ್ಸವ- 2025 ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಂಗಳೂರಿನ ಭರತನಾಟ್ಯ ವಿಧುಷಿ ಶ್ರೀವಲ್ಲಿ ಅಂಬರೀಶ್ ಹಾಗೂ ಅಂಬರೀಶ್ ಅವರು ಅತಿಥಿಗಳಾಗಿ ಆಗಮಿಸಲಿದ್ದು, ನಟನಂ ಬಾಲನಾಟ್ಯ ಕೇಂದ್ರದ ಕಾರ್ಯದರ್ಶಿ ಆರ್. ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಲೆನಾಡಿನ ಕಲಾ ರಸಿಕರಿಗೆ ದೇಶದ ವಿವಿಧೆಡೆಯ ನೃತ್ಯ ಕಲೆಗಳನ್ನು ಉಣಬಡಿಸುವ ಸಲುವಾಗಿ ವಿಶೇಷ ನೃತ್ಯಗಳ ಪ್ರದರ್ಶನಗಳು ನಡೆಯಲಿವೆ ಎಂದು ವಿದ್ವಾನ್ ಡಾ. ಕೇಶವ ಕುಮಾರ್ ಪಿಳ್ಳೈ ತಿಳಿಸಿದ್ದಾರೆ.

ಅದರಲ್ಲಿ ಒಡಿಸ್ಸಿ ನೃತ್ಯವನ್ನು ಬೆಂಗಳೂರಿನ ನವಭಾವ ನೃತ್ಯ ಶಾಲೆಯ ಫೌಂಡರ್ ಗುರು ಸೌಮ್ಯ ರಂಗಸ್ವಾಮಿ ಪ್ರದರ್ಶಿಸಲಿದ್ದಾರೆ. ಬೆಂಗಳೂರಿನ ನಾಟ್ಯಪ್ರಿಯ ಕಲಾನಿ ಕೇತನ ಕೇಂದ್ರದ ಫೌಂಡರ್ ವಿದುಷಿ ಸುಪ್ರಿಯ ಕಾರ್ತಿಕೇಯನ್ ಕೂಚು ಪುಡಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.

ಮೋಹಿನಿ ಆಟಂ ನಾಟ್ಯವನ್ನು ಶಿವಮೊಗ್ಗ ಬೊಮ್ಮನಕಟ್ಟೆಯ ಶಿವಾನಿ ಭರತನಾಟ್ಯ ಕಲಾ ಕೇಂದ್ರದ ವಿದುಷಿ ಚೈತ್ರ ಕಾರ್ತಿಕ್ ಪ್ರದರ್ಶಿಸಲಿದ್ದು, ಭರತನಾಟ್ಯಂ ಅನ್ನು ನಟನಂ ಕೇಂದ್ರದ ವಿಧುಷಿ ನಾಟ್ಯಶ್ರೀ ಚೇತನ್ ಹಾಗೂ ವಿದ್ವಾನ್ ಚೇತನ್ ಎಸ್.ಸಿ. ಪ್ರದರ್ಶಿಸಲಿದ್ದು, ಅದೇ ಬಗೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಾಟ್ಯಶಂಕರ ನೃತ್ಯಾಲಯದ ವಿದ್ವಾನ್ ಮಾಲತೇಶ್ ಟಿಕಾರೆ ಪ್ರದರ್ಶಿಸಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ದಕ್ಷ ಯಜ್ಞ ನೃತ್ಯ ರೂಪಕವನ್ನ ವಿದ್ವಾನ್ ಡಾ. ಎಸ್. ಕೇಶವಕುಮಾರ್ ಪಿಳ್ಳೈ ಪ್ರದರ್ಶಿಸಲಿದ್ದಾರೆ. ಈ ಸಂದರ್ಭದಲ್ಲಿ ಜಪಾನಿನ ಫ್ಯಾನ್ ಡ್ಯಾನ್ಸ್ ಹಾಗೂ ಈಜಿಪ್ಟಿನ ವಿಂಗ್ ಡ್ಯಾನ್ಸ್‌ನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.

ಈ ವಿಶೇಷ ಕಾರ್‍ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಲು ನಟನಂ ಬಾಲನಾಟ್ಯ ಕೇಂದ್ರದ ಕಲಾವಿದರು, ಪೋಷಕರು ಹಾಗೂ ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *