
ಶಿವಮೊಗ್ಗ :- ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಇದೇ ಜನವರಿ 12ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪೂರ್ಣಿಮಾ ಸುನಿಲ್ ಅವರು ವೈಯಕ್ತಿಕ ಕಾರಣದಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿರುವುದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ನಾನು ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತರಾಗಿರುವುದನ್ನ ಮತದಾರರಿಗೆ ಈ ಮೂಲಕ ಘೋಷಿಸುತ್ತಿದ್ದೇನೆ ಎಂದು ಪೂರ್ಣಿಮಾ ಸುನೀಲ್ ತಿಳಿಸಿದ್ದಾರೆ.