google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಎಲ್‌ಐಸಿ ಗ್ರಾಹಕರ ಪಾಲಿಸಿಗಳ ಮೇಲಿನ ಜಿ.ಎಸ್.ಟಿ. ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಶಿವಮೊಗ್ಗ ಘಟಕದಿಂದ ಇಂದು ಎಲ್‌ಐಸಿ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಭಾರತೀಯ ಜೀವ ವಿಮಾ ನಿಗಮವು ಇತ್ತೀಚೆಗೆ ವ್ಯವಹಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದು ಇದು ಎಲ್‌ಐಸಿ ಪ್ರತಿನಿಧಿಗಳ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಗ್ರಾಹಕರ ಪಾಲಿಸಿ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು. ಪಾಲಿಸಿಗಳ ಮೇಲಿನ ಬೋನಸ್ ಅನ್ನು ಹೆಚ್ಚಿಸಬೇಕು. ಪ್ರವೇಶದ ವಯಸ್ಸನ್ನು 50 ರಿಂದ ೫೫ಕ್ಕೆ ಹೆಚ್ಚಿಸಬೇಕು. ಕಮಿಷನ್ ಹಿಂಪಡೆಯುವಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರತಿನಿಧಿಗಳ ಕಮಿಷನ್ ಹಳೆ ಪದ್ಧತಿಯನ್ನೇ ಮುಂದುವರೆಸಬೇಕು. ಗ್ರಾಚ್ಯುಟಿ ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಹೋರಾಟವು ಲಿಯಾಫಿ ಸಂಘಟನೆ ವತಿಯಿಂದ ದೇಶಾದ್ಯಂತ ನಡೆಯುತ್ತಿದ್ದು, ಬೇಡಿಕೆಗಳು ಈಡೇರದಿದ್ದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ಧಿಷ್ಟ ಕಾಲಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ವಿಭಾಗೀಯ ಅಧ್ಯಕ್ಷ ಎ. ವೀರೇಶಪ್ಪ, ಪ್ರಮುಖರಾದ ಸತೀಶ್ ಕುಮಾರ್, ರಘು, ಮಂಜುನಾಥ್ ತೀರ್ಥಹಳ್ಳಿ, ಕೆ.ವಿ. ಕೇಶವಮೂರ್ತಿ, ಪಿ.ಕೆ. ನಾಗೇಶ್ ರಾವ್, ಈಶ್ವರ್, ಸುಧೀರ್ ನಾಯಕ್ ಸೇರಿದಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *