google.com, pub-9939191130407836, DIRECT, f08c47fec0942fa0
filter: 0; fileterIntensity: 0.8; filterMask: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 0; AI_Scene: (-1, -1); aec_lux: 255.36594; aec_lux_index: 0; hist255: 0.0; hist252~255: 0.0; hist0~15: 0.0; motionLevel: -1; weatherinfo: null;

ಶಿವಮೊಗ್ಗ :- ಹಯಗ್ರೀವ ದೇವರ ಗುಣರೂಪ ಚಿಂತನೆಯನ್ನು ಚಿತ್ರಿಸಿ ವಿವರಿಸಿ ಭಗವದ್ ಭಕ್ತರಿಗೆ ನೀಡಿದವರು ಭಾವಿ ಸಮೀರರಾದ ಶ್ರೀ ವಾದಿರಾಜರು. ಅಂತಹ ಮಹಾ ಮಹಿಮರ ಬಿಂಬ ರೂಪಿ ಭಗವಂತನ ಮೂರ್ತಿಯು ದೈವಜ್ಞರ ಎರಕದಲ್ಲಿ ಕಂಡು ಬಂದು, ದೇವರ ಪ್ರೇರಣೆ ಯಂತೆ ವಾದಿರಾಜರಿಗೆ ನೀಡಿ ಶಿಷ್ಯತ್ವ ಪಡೆದ ಸಮಾಜ ನಿಮ್ಮದು ಎಂದು ಬಾಳಗಾರು ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ತಿಳಿಸಿದರು.

ಶ್ರೀ ವಾದಿರಾಜರ ಜಯಂತ್ಯೋ ತ್ಸವದ ಅಂಗವಾಗಿ ದೈವಜ್ಞ ಕಲ್ಯಾಣ ಮಂಟಪದ ಸಭಾವೇದಿಕಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ವಾದಿರಾಜ ಶಿಷ್ಯ ವೃಂದದವರು ಹಮ್ಮಿಕೊಂಡಿದ್ದ ಆಶೀರ್ವಚನ ನೀಡಿದ ಶ್ರೀಗಳು ಚತುರ್ಭುಜ ಹಯಗ್ರೀವ ದೇವರ ಹಸ್ತಗಳಲ್ಲಿರುವ ಜಪಮಾಲೆ, ಪುಸ್ತಕ, ಚಿನ್ಮಯ ಮುದ್ರೆ, ಶಂಖ ಇವು ಜನ ಮತ್ತು ಭಾಗ್ಯದ ಕುರಿತು ನೀಡಿದ ಸಂದೇಶಗಳಾಗಿವೆ ಎಂದು ವಿವರಿಸಿದರು.

ತಾಳುವಿಕೆಗಿಂತ ತಪವು ಇಲ್ಲ ಎಂಬ ವಾದಿರಾಜರ ಕೀರ್ತನೆ ಪ್ರಸ್ತುತ ಇಂದಿನ ಜೀವನಕ್ಕೆ ಹತ್ತಿರದಲ್ಲಿ ಇದೆ ಎಂದು ವಿವರಿಸಿ ಇದನ್ನು ಸರಿಯಾಗಿ ತಿಳಿದು ನಡೆದರೆ ಮನೋತಜ್ಞರತ್ತ ಹೋಗುವ ಅವಶ್ಯಕತೆ ಇಲ್ಲ. ಅನ್ಯರು ಹೇಳುವ ಬೇಡದ ವಿಷಯ ಬಗ್ಗೆ ತಿರಸ್ಕಾರ ಇರಲಿ. ತಾಳುಮೆ ಎಲ್ಲದಿಗಿಂತ ಮಿಗಿಲಾದದ್ದು ಎಂಬ ವಾದಿರಾಜ ಮಾತನ್ನು ಆಶೀರ್ವಚನ ದಲ್ಲಿ ಹೇಳಿದರು.
ಸತಿ ಪತಿ ಸಂಸಾರ ಹೇಗಿರಬೇಕು ಎಂಬುದರ ಕುರಿತು ಕೊಳಲು ಮತ್ತು ನುಡಿಸುವವನ ಕಾರ್ಯ ಕ್ಷಮತೆಯ ಉದಾಹರಣೆ ನೀಡಿ ಸತಿಪತಿ ಅರಿತು ಒಂದಾಗಿ ಬಾಳಿ ಎಂದು ಹರಸಿದರು. ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರು ಹೂವಿನ ಕೆರೆ, ಸೋದೆ ಕ್ಷೇತ್ರ ಅಭಿವೃದ್ಧಿ ಕೆಲಸದ ಜೊತೆಯಲ್ಲಿ ಶ್ರೀ ವಾದಿರಾಜರ ವೈಭವೋತ್ಸವವನ್ನು ಹಮ್ಮಿಕೊಂಡಿರುವ ಬಗ್ಗೆ ಶ್ರೀಗಳು ಶ್ಲಾಘಿಸಿದರು.

ವಿವೇಕ್ ನಾಗಭೂಷಣ ಕಾರ್‍ಯಕ್ರಮ ನಿರ್ವಹಿಸಿದರು ದೈವಜ್ಞ ಮಹಿಳೆಯರು ಲಕ್ಷ್ಮೀ ಶೋಭಾನೆ ಹೇಳಿದರು. ಶೇಷಗಿರಿ,ಎಪಿ ಗುರುರಾಜ್, ರಮೇಶ್, ಹರೀಶ್ ಆಚಾರ್ಯ,ಪವಮಾನ ಆಚಾರ್, ವೇದವ್ಯಾಸ ಸತೀಶ್ ಹಯಗ್ರೀವ, ನಾಗರಾಜ್ ಎ.ಪಿ. ನಾಗಭೂಷಣ ಚಾರ್, ಪ್ರದೀಪ್, ಸತೀಶ್ ಮಲ್ಡಿಂಗ್, ನಾಗರಾಜ್ ಶೇಟ್, ರಾಜೇಶ್, ಪ್ರಶಾಂತ್, ಸತೀಶ್, ಗಿರೀಶ್ ಶೇಟ ಮೋಹನ ಶೇಟ್ ಮತ್ತು ದೈವಜ್ಞ ಬ್ರಾಹ್ಮಣ ಶ್ರೀ ವಾದಿ ರಾಜ ಶಿಷ್ಯ ವೃಂದ, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು.ಕೊನೆಯಲ್ಲಿ ಶ್ರೀಗಳು ಭಕ್ತರಿಗೆಲ್ಲಾ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Leave a Reply

Your email address will not be published. Required fields are marked *