
ಶಿವಮೊಗ್ಗ :- ಶಾಲಾ-ಕಾಲೇಜುಗಳಲ್ಲಿ ಅಶ್ಲೀಲ ಗೀತೆಗಳು ನೃತ್ಯಕ್ಕೆ ಅವಕಾಶ ನೀಡದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿ ಮಾನಿ ಬಣದಿಂದ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸ ಲಾಯಿತು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡುವುದನ್ನು ನಿಷೇಧ ಮಾಡುವಂತೆ ಹಾಗೂ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹೀಗಾಗಿ ಇಂದು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಕಲಿಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ. ಶಾಲೆ ಹಾಗೂ ಕಾಲೇಜುಗಳು ಅದರ ಕೇಂದ್ರಗಳಾಗಿವೆ.
ಆದರೆ ಕೆಲವು ಖಾಸಗಿ ಶಾಲಾ-ಕಾಲೇಜುಗಳು ವಾರ್ಷಿ ಕೋತ್ಸವ ಸಮಾರಂಭದಲ್ಲಿ ಒಳ್ಳೆಯ ದೇಶಭಕ್ತಿ ಗೀತೆ, ಭಾವ ಗೀತೆ, ಕನ್ನಡ ನಾಡು-ನುಡಿಗಳ ಗೀತೆಗಳಿಗೆ ಆದ್ಯತೆ ನೀಡದೆ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡು ತ್ತಿರುವುದು ಪ್ರತಿ ವರ್ಷ ಕಂಡು ಬರುತ್ತದೆ. ಈ ವರ್ಷದಿಂದ ಯಾವುದೇ ಶಾಲಾ-ಕಾಲೇಜು ಗಳಲ್ಲಿ ಶಿಕ್ಷಕರು ಮಕ್ಕಳಿಗೆ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡಿಸ ಬಾರದು. ಒಂದು ವೇಳೆ ಮಾಡಿ ಸಿದ್ದೇ ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳಿಗೆ ಆದೇಶ ನೀಡಬೇಕೆಂದು ತಮ್ಮಲ್ಲಿ ವೇದಿಕೆಯು ಮನವಿ ಮಾಡಿಕೊಳ್ಳುತ್ತದೆ. ಹಾಗೂ ಶಿಕ್ಷಣ ಸಚಿವರು ಈ ವಿಚಾರ ವಾಗಿ ಸೂಕ್ತ ಆದೇಶವನ್ನು ತಕ್ಷಣವೇ ಹೊರಡಿಸಬೇಕೆಂದು ಸಂಘಟನೆಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., ಜಿಲ್ಲಾ ಉಪಾಧ್ಯಕ್ಷ ಮುಜಿಬುಲ್ಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಶಫಿ, ವಿಜಯ ಕುಮಾರ್, ಮಹಿಳಾ ಅಧ್ಯಕ್ಷೆ ಕವಿತಾ ಸಿ., ಜ್ಯೋತಿ ಎನ್., ಪದ್ಮ ಎನ್., ನೂರುಲ್ಲಖಾನ್, ಸಂತೋಷ, ಪ್ರವೀಣ್ ಕುಮಾರ್, ಆರತಿ ತಿವಾರಿ, ಸತೀಶಣ್ಣ ಪದ್ಮ ಎನ್., ಆರತಿ ತಿವಾರಿ, ಅಶ್ವಥ್, ಅನ್ಸರ್ ಪಾಷಾ, ಸಾದಿಕ್ ಇತರರು ಹಾಜರಿದ್ದರು.