ಶಿವಮೊಗ್ಗ :- ನಾಡಿನೆಲ್ಲೆಡೆ ಇಂದು ಪವಿತ್ರ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿದೆ. ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀ ವೆಂಕಟರಮಣ ದೇವ ಮಂದಿರ, ಕೋಟೆ, ಶ್ರೀ ಸೀತಾರಾಮಾಂಜನೇಯ ದೇವಸ್ಥಾನ, ಜಯನಗರ ರಾಮಮಂದಿರ, ನವುಲೆಯ ವೆಂಕಟರಮಣ, ವೆಂಕಟೇಶ್ವರ ನಗರದ ವೆಂಕಟರಮಣ, ಅಶ್ವತ್ಥ್‌ನಗರದ ದೇವಗಿರಿ ವೆಂಕಟರಮಣ, ಗೋಪಾಳದ ರಂಗನಾಥಸ್ವಾಮಿ ದೇವಾಲಯ, ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ, ಮಿಲ್ಟ್ರಿಕ್ಯಾಂಪ್‌ನ ಶ್ರೀನಿವಾಸ ಸ್ವಾಮಿ ದೇವಾಲಯ, ಬಿ.ಹೆಚ್. ರಸ್ತೆಯ ಶ್ರೀ ತಿರುಪತಿ ವೇಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ನಗರದ ಅನೇಕ ದೇವಾಲಯಗಳಲ್ಲಿ ಬೆಳಿಗ್ಗೆ ೬ ರಿಂದಲೇ ವಿಶೇಷ ಪೂಜ ಕೈಂಕರ್ಯಗಳು ನೆರವೇರಿದವು. ಎಲ್ಲಾ ದೇವಾಲಯಗಳಲ್ಲೂ ಭಕ್ತರು ನಡುಗುವ ಚಳಿಯಲ್ಲೂ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಎಲ್ಲಾ ದೇವಾಲಯಗಳಲ್ಲೂ ವಿಶೇಷ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೆಲವು ದೇವಾಲಯಗಳಲ್ಲಿ ಆರೋಗ್ಯ ತಪಾಸಣಾ ಶಿಬಿರವೂ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಸಪ್ತದ್ವಾರಗಳ ನಡುವೆ ವೈಕುಂಠ ದರ್ಶನ ಕೂಡ ವಿಶೇಷವಾಗಿತ್ತು. ಗಣ್ಯಾತಿ ಗಣ್ಯರು ಕೂಡ ದೇವರ ದರ್ಶನ ಪಡೆದು, ಪುನೀತರಾದರು.

ಈ ದಿನದ ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ ಮತ್ತು ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮವನ್ನು ಸೇರಬಹುದು. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ. ವೈಕುಂಠ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ಪವಿತ್ರ ದಿನವಾಗಿದ್ದು, ಈ ದಿನದ ಉಪವಾಸವಿದ್ದು ಪೂಜೆ ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ವೈಕುಂಠ ಏಕಾದಶಿ ವ್ರತ ಆಚರಿಸುವುದರಿಂದ, ಜನನ-ಮರಣ ಚಕ್ರದಿಂದ ಮುಕ್ತಿ (ಮೋಕ್ಷ) ನೀಡಿ, ವೈಕುಂಠದಲ್ಲಿ ಸ್ಥಾನ ಲಭಿಸುತ್ತದೆ. ಇದನ್ನು ‘ಮೋಕ್ಷ ಏಕಾದಶಿ’ ಎಂದೂ ಪ್ರಸಿದ್ಧವಾಗಿದೆ, ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ವಿಷ್ಣುವಿನ ಅನುಗ್ರಹ ಪಡೆಯಲು ಸಹಕಾರಿ ಎಂದು ನಂಬಲಾಗಿದೆ.

ದೇಶದಾದ್ಯಂತ ಹಿಂದೂಗಳು ಈ ಪವಿತ್ರ ದಿನವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ. ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಯೊಂದು ವಿಷ್ಣು ದೇವನ ದೇವಾಲಯದಲ್ಲೂ ವೈಕುಂಠ ಏಕಾದಶಿ ದಿನದಂದು ವಿಶೇಷ ಪ್ರಾರ್ಥನೆ, ಪೂಜೆ-ಪುನಸ್ಕಾರಗಳು, ಯಜ್ಞಗಳು, ಪ್ರವಚನೆ ಹಾಗೂ ವಿವಿಧ ರೀತಿಯಾದ ಧಾರ್ಮಿಕ ಆವಚರಣೆಗಳನ್ನು ನಡೆಸಲಾಗುತ್ತದೆ.

ಈ ದಿನದ ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ ಮತ್ತು ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮವನ್ನು ಸೇರಬಹುದು. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ. ಈ ದಿನ ವಿಷ್ಣುವಿನ ವೈಕುಂಠ ಧಾಮದ ಬಾಗಿಲುಗಳು ಭಕ್ತರಿಗೆ ತೆರೆದಿರುತ್ತವೆ ಎಂದು ನಂಬಿಕೆ, ಆದ್ದರಿಂದಲೇ ಇದನ್ನು ’ವೈಕುಂಠ ಏಕಾದಶಿ’ ಎನ್ನುತ್ತಾರೆ.

ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿ ಈ ಮಾಸದ (ಮಾರ್ಗಶಿರ) ಮಹತ್ವವನ್ನು ಹೇಳಿದ್ದಾನೆ. ಪದ್ಮ ಪುರಾಣದ ಪ್ರಕಾರ, ಈ ದಿನ ಮುರಾ ಎಂಬ ರಾಕ್ಷಸನ ಸಂಹಾರದಿಂದ ‘ಏಕಾದಶಿ ದೇವಿ’ ಉದ್ಭವಿಸಿದಳು. ಅವಳನ್ನು ಪೂಜಿಸಿದವರಿಗೆ ಮೋಕ್ಷ ಕರುಣಿಸಬೇಕೆಂದು ವಿಷ್ಣುವಿಗೆ ವರ ಬೇಡಿದಳು. ವಿಷ್ಣುವಿನ ನಾಮಸ್ಮರಣೆ ಮತ್ತು ಪ್ರಾರ್ಥನೆಗಳಿಂದ ದೈವಿಕ ಸಂಪರ್ಕ ಹೆಚ್ಚಾಗುತ್ತದೆ ಎಂಬ ಪ್ರತೀತಿಯಿದೆ. ವರ್ಷದಲ್ಲಿ 24 ಏಕಾದಶಿಗಳು ಬರಲಿವೆ. ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದೆ. ವೈದಿಕ ಜ್ಯೋತಿಷದ ಪ್ರಕಾರ, ಈ ದಿನದಂದು ವಿಷ್ಣುವಿನ ನಿವಾಸದ ದ್ವಾರಗಳು ತೆರೆದಿರುತ್ತವೆ. ಹಾಗಾಗಿಯೇ, ವೈಕುಂಠ ಏಕಾದಿನ ದಿನ ಭಕ್ತರು ಉಪವಾಸ ಮಾಡಲಿದ್ದಾರೆ. ಇದರಿಂದ ಭಕ್ತರ ಪ್ರಾರ್ಥನೆ ಇಡೇರುತ್ತವೆ ಎಂಬ ನಂಬಿಕೆ ಇದೆ. ಬೆಳಗಿನ ಜವದಿಂದಲೇ ದರ್ಶನಕ್ಕಾಗಿ ಕ್ಯೂನಲ್ಲಿ ಭಕ್ತರು ನಿಂತಿದ್ದಾರೆ.

