ಶಿವಮೊಗ್ಗ :- ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಶಿವಮೊಗ್ಗ ವಾಸನ್ ಐ ಕೇರ್ ರವರ ಸಹಭಾಗಿತ್ವದಲ್ಲಿ ಮುಂದುವರೆವ ವದ್ಯಕೀಯ ಶಿಕ್ಷಣ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬಿ.ಎ.ಎಂ.ಎಸ್. ಪರೀಕ್ಷೆಯಲ್ಲಿ ಶಿವಮೊಗ್ಗದಲ್ಲಿರುವ ಮೂರು ಆಯುರ್ವೇದ ಕಾಲೇಜಿನ ರಾಂಕ್ ಪಡೆದ ವೈದ್ಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಾಸನ್ ಐ ಕೇರ್ ಆಸ್ಪತ್ರೆಯ ಡಾ. ಪ್ರಸನ್ನಕುಮಾರ್, ಪೊರೆ ಗ್ಲುಕೊಮಾ ಬಂದಾಗ ಅಗತ್ಯವಿರುವ ಚಿಕಿತ್ಸೆ ನಾನಾ ರೀತಿಯ ಲೆನ್ಸ್, ಶಸ್ತ್ರಚಿಕಿತ್ಸೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಡಾ. ಗುಣಶ್ರೀ ಅವರು ಮಾತನಾಡಿ, ಮಧುಮೇಹದಿಂದಾಗುವ ಕಣ್ಣಿನ ತೊಂದರೆಗಳು, ರೆಟಿನಲ್ ಸಮಸ್ಯೆಗಳು ಹಾಗೂ ಅದರ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಆಯುರ್ವೇದ ಕಾಲೇಜಿನ ಡಾ. ಪುಷ್ಪಲತಾ, ಡಾ. ಶ್ರೀರಕ್ಷ, ಡಾ. ಅಭಿಷೇಕ ಮಠ, ಟಿ.ಎಂ.ಎ. ಕಾಲೇಜಿನ ಡಾ. ಸಿಂಧು ಡಾ. ಲಲಿತೇಷ್ವರಿ, ಡಾ. ಪ್ರತಿಮಾ, ಬಾಪೂಜಿ ಆಯುರ್ವೇದ ಕಾಲೇಜಿನ ಡಾ. ಮಹಾಲಕ್ಷಿ ಹೋಳಳದ್, ಡಾ. ಭೂಮಿಕ, ಡಾ. ಬಿಂದು ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಡಾ. ಶುಭ, ಡಾ. ಅಪರ್ಣ, ಡಾ. ರಂಜನಿ, ಡಾ. ಅಕ್ಷತ, ಡಾ. ಸುರೇಶ್. ಡಾ. ಮರುಳಾರಾಧ್ಯ ಡಾ. ಸುಬ್ರಾಯಭಟ್ ಡಾ. ಶ್ರೀನಿವಾಸ ರೆಡ್ಡಿ, ಡಾ. ವಿನೋದ್ ಹಾಗೂ ಆಯುರ್ವೇದ ವೈದ್ಯರು ಉಪಸ್ಥಿತರಿದ್ದರು. ಡಾ. ಸಂತೋಷ್ ಸ್ವಾಗತಿಸಿದರು. ಡಾ. ಶಶಿಕಾಂತ ವಂದಿಸಿ. ಡಾ. ಶಿಶಿರ. ಡಾ. ಚಿತ್ರಲೇಖಾ ನಿರೂಪಿಸಿದರು.