ಶಿವಮೊಗ್ಗ :- ನಗರದ ವಾರ್ಡ್ ನಂಬರ್ 4ರ ನಿವಾಸಿಗಳು ರಸ್ತೆ ಕಾಮಗಾರಿ ಅವೈಜನಿಕವಾಗಿದ್ದು ಓಡಾಡಲು ತೊಂದರೆಯಾಗಿದೆ ಎಂದು ಆರೋಪಿಸಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್ ನೇತೃತ್ವದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್‌ನ ಪ್ರಮುಖ ರಸ್ತೆಯ ಎರಡು ಭಾಗದಲ್ಲಿ ರೋಡ್ ಕ್ಲೋಸ್ ಮಾಡಿರುವುದು ಶಿವಮೊಗ್ಗ ನಗರದ ದುರಾದೃಷ್ಟಕರ ಸಂಗತಿಯಾಗಿದೆ. ದಿನಕ್ಕೆ ಸಾವಿರಾರು ಜನರು ಓಡಾಡುವ ಜಗವನ್ನು ಅವೈಜನಿಕವಾಗಿ ಅಗೆದು ಕೇವಲ 500 ಮೀಟರ್ ರೋಡನ್ನು ಮಾಡಲು ಎರಡು ತಿಂಗಳಿಂದ ತೊಂದರೆಯಾಗಿದ್ದು, ಸಾರ್ವಜನಿಕರಿಗೆ ನ್ಯಾಯ ಕೊಡಿಸಲು ಸ್ಥಳೀಯ ನಿವಾಸಿಗಳೆಲ್ಲರೂ ಸೇರಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ನಾಳೆ ಸಂಜೆ ಒಳಗಾಗಿ ಆಂಬುಲೆನ್ಸ್ ಸ್ಕೂಲ್ ಬಸ್ ಸಾರ್ವಜನಿಕರ ಕಾರುಗಳು ಹಾಗೂ ಬೈಕುಗಳಿಗೆ ಒಂದು ಬದಿ ಓಡಾಡಲು ಅನುವು ಮಾಡದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.