ಭದ್ರಾವತಿ :- ನಗರದ ಹೊಸಮನೆ ಹಿಂದೂ ಮಹಾ ಸಭಾ ಹಿಂದೂ ರಾಷ್ಟ್ರಸೇನಾ ಸಮಿತಿ ವತಿಯಿಂದ ಪ್ರತಿಷ್ಟಾಪಿಸಿರುವ 8ದಿನಗಳ ಕಾಲ ಪೂಜಿಸಿದ್ದ 53 ನೇ ವರ್ಷದ ಗಣಪತಿ ವಿಸರ್ಜನೆಗೆ ಹೊಸಮನೆ ಗಣಪತಿ ದೇವಸ್ಥಾನದ ಎದುರು ಇಂದು ಬೆಳಿಗ್ಗೆ 11 ಗಂಟೆಗೆ ಮೂರ್ತಿಗೆ ಶಾಸಕ ಬಿ.ಕೆ. ಸಂಗಮಮೇಶ್ವರ ಪೂಜೆ ಸಲ್ಲಿಸುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.
ಜಿಲ್ಲೆಯಲ್ಲಿಯೆ ಇದು ಪ್ರತಿಷ್ಟಿತ ಗಣಪತಿ ಎಂದು ಹೆಸರು ಪಡೆದಿದೆ. ಮೆರವಣಿಗೆ ಸಾಗುವ ರಾಜ ಬೀದಿಗಳಲ್ಲಿ ಕೇಸರಿ ಬಂಟಿಗ್ಸ್ಗಳನ್ನು ಕಟ್ಟಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ರಾಷ್ಟ್ರ ನಾಯಕರುಗಳ ಭಾವ ಚಿತ್ರ ಹಾಗು ಹೆಸರುಗಳನ್ನು ನಾಮಕರಣ ಮಾಡಲಾಗಿತ್ತು. ಮೆರವಣಿಗೆಯಲ್ಲಿ ನಂದಿ ಧ್ವಜ, ಕೀಲ;ಉ ಕುದುರೆ ನೃತ್ಯ, ಗೊಂಬೆ ಕುಣಿತ, ವೀರಗಾಸೆ, ನಾದಸ್ವರ ಸೇರಿದಂತೆ ಇತರ ಕಲಾ ತಂಡಗಳು ಭಾಗವಹಿಸಿದ್ದವು. ಇವುಗಳ ಲಯ ಬದ್ದ ಶಬ್ದಕ್ಕೆ ಯುವ ಜನರು ಹುಚ್ಚೇದ್ದು ಕುಣಿದು ಕುಪ್ಪಳಿಸಿ ತಮ್ಮ ಭಕ್ತಿ ಭಾವವನ್ನು ಮೆರೆದರು.

ಮೆರವಣಿಗೆಯು ಹೊಸಮನೆ ಗಣಪತಿ ದೇವಸ್ಥಾನದಿಂದ ಹೊರಟು ಶಿವಾಜಿ ಸರ್ಕಲ್, ವರೆಗೆ ಹೋಗಿ ಪುನಃ ವಾಪಸ್ ಅದೇ ದಾರಿಯಲ್ಲಿ ಬಂದು ಹೊಸಮನೆ ಮುಖ್ಯ ರಸ್ತೆ, ರಂಗಪ್ಪ ಸರ್ಕಲ್, ಚನ್ನಗಿರಿ ರಸ್ತೆ, ಮಾಧವಚಾರ್ ಸರ್ಕಲ್, ಬಿಹೆಚ್ರಸ್ತೆ. ಹಾಲಪ್ಪ ಸರ್ಕಲ್, ಅಂಡ್ ಬ್ರೀಡ್ಜ್ ಮೂಲಕ ಹಾದು ಲೋಯರ್ ಹುತ್ತದವರೆಗೆ ಹೋಗಿ ಪುನಃ ವಾಪಸ್ ಅದೇ ದಾರಿಯಲ್ಲಿ ಬಂದು ತರೀಕೆರೆ ರಸ್ತೆ, ಗಾಂಧಿ ಸರ್ಕಲ್ವರೆಗೆ ಹೋಗಿ ವಾಪಸ್ ನಗರಸಭೆ ಕಚೇರಿ ಎದುರು ಭದ್ರಾ ನದಿಯಲ್ಲಿ ರಾತ್ರಿ 9ಗಂಟೆಗೆ ಸುಮಾ ರಿಗೆ ವಿಸರ್ಜನೆ ಮಾಡಲಾಯಿತು.
ಮೆರವಣಿಗೆ ಸಾಗುವ ದಾರಿಯಲ್ಲಿ ವಿವಿಧ ಸಂಘ ಸಂಸ್ಥೆಗಳು. ಸ್ನೇಹಿತರ ಬಳಗಳು ಪೈಪೋಟಿ ಮೇಲೆ ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದ ಭಕ್ತರುಗಳಿಗೆ ಪಲಾವ್, ಅನ್ನ ಸಾಂಬರ್, ಪಾಯಸ, ಮೊಸರನ್ನ, ಬಿಸಿಬೇಳೆ ಬಾತ್, ಲಡ್ಡು, ನೀರಿನ ಬಾಟಲ್ ಸೇರಿದಂತೆ ಇತರ ಆಹಾರ ಪದಾರ್ಧಗಳನ್ನು ವಿತರಿಸಿ ತಮ್ಮ ಭಕ್ತಿಯನ್ನು ಮೆರೆದರು.ಗಣಪತಿ ವಿಗ್ರಹಕ್ಕೆ ಮೆರವಣಿಗೆ ದಾರಿಯುದ್ದಕ್ಕ್ಕೂ ಭಾರಿ ಗಾತ್ರ ಹಾರಗಳು, ಹಣ್ಣಿನ ಹಾರಗಳು, ಪುಷ್ಪಾರ್ಚನೆ ಮೂಲಕ ವಿಗ್ರಹಕ್ಕೆ ನಮಿಸಿ ಧನ್ಯರಾದರೆ, ಕರ್ಪೂರದಲ್ಲಿ ಓಂ ಚಿತ್ತಾರ ಬರೆದು ಆಋತಿ ಬೆಳಗಿ ನಮಿಸಿದರು.
ಮೆವಣಿಗೆಯಲ್ಲಿ ಎ.ಸಿ. ಸತ್ಯ ನಾರಾಯಣ, ತಹಶೀಲ್ದಾರ್ ಪರಸಪ್ಪ ಕುರುಬರ, ನಗರಸಭೆ ಆಯುಕ್ತ ಹೇಮಂತ್, ನಗರಸಭೆ ಅಧ್ಯಕ್ಷೆ ಗೀತಾ ಜೆ.ಸಿ. ರಾಜ್ ಕುಮಾರ್, ಮಣಿ, ಬಿ.ಕೆ.ಮೋಹನ್, ಲತಾ ಚಂದ್ರಶೇಖರ್, ಭಾಗ್ಯ ಲಕ್ಷ್ಮಿ, ಹೇಮಾವತಿ ವಿಶ್ವನಾಥ್ ರಾವ್, ಆಶಾ, ಕಲ್ಪನಾ, ಶಕುಂತಲ, ಬಿ.ಕೆ.ಶಿವಕುಮಾರ್, ಬಿ.ಎಸ್. ಗಣೇಶ್, ಚನ್ನಪ್ಪ, ಜಿ.ಧರ್ಮ ಪ್ರಸಾದ್, ಕೆ.ಹೆಚ್. ತೀರ್ಥಯ್ಯ, ಸಿಮೆಂಟ್ ಮಂಜುನಾಥ್, ಎಂ.ಎ. ಅಜಿತ್, ಆರ್.ಕರುಣಾ ಮೂರ್ತಿ, ಬಿಜೆಪಿ, ಜೆಡಿಎಸ್. ಭಜರಂಗದಳ. ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಬಾಗವಹಿಸಿದ್ದರು.