google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮತಗಳ್ಳತನದ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಗೋಡೆ, ಆಟೋ ರಿಕ್ಷಾ, ಬಸ್‌ಗಳಿಗೆ ‘ಸ್ಟಾಪ್ ಮತಗಳ್ಳತನ’ ಎಂಬ ಸ್ಟಿಕ್ಕರ್ ಅಂಟಿಸಿ ಪ್ರತಿಭಟಿಸಿದೆ

ಪ್ರಧಾನಿ ಮೋದಿ ವಿರುದ್ಧ ಮತ್ತು ಚುನಾವಣೆ ಆಯೋಗ ವಿರುದ್ಧ ಘೋಷಣೆ ಕೂಗಲಾಯಿತು. ಚೋರ್ ನರೇಂದ್ರ ಮೋದಿಗೆ ದಿಕ್ಕಾರ, ಮತಗಳ್ಳತನದಿಂದ ಪ್ರಧಾನಿ ಆದ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ ಏSಖಖಿಅ ಬಸ್ ಗಳಿಗೆ ಸ್ಟಾಪ್ ಮತಗಳ್ಳತನದ ಸ್ಟಿಕ್ಕರ್ ಅಂಟಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ಮತಗಳ್ಳತನದಿಂದ ಪ್ರಧಾನಿ ಮೋದಿ ಇದುವರೆಗೆ ಚುನಾವಣೆ ಗೆಲ್ಲುತ್ತ ಬಂದಿದ್ದಾರೆ. ಅವರ ಗೆಲುವಿನ ಸೂಕ್ಷ್ಮತೆಯನ್ನ ರಾಹುಲ್ ಗಾಂಧಿ ಕಂಡುಹಿಡಿದು ನರೇಂದ್ರ ಮೋದಿಯವರ ಗೆಲುವಿನ ರಹಸ್ಯವನ್ನ ಬಹಿರಂಗ ಪಡಿಸಿದ್ದಾರೆ. ಪ್ರಧಾನಿ ಮೋದಿ ರಾಜೀನಾಮೆ ನೀಡಿ ಮರು ಆಯ್ಕೆಯಾಗಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹೆಚ್.ಸಿ. ಯೋಗೀಶ್, ವಿಜಯಕುಮಾರ್, ಬಾಲಾಜಿ, ಚೇತನ್ ಗೌಡ ಮೊದಲಾದವರು ಈ ಮತಜಗೃತಿ ಅಭಿಯಾನದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *