
ಶಿವಮೊಗ್ಗ :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ 70ದಿನಗಳ ಪ್ರದರ್ಶನ ಕಂಡ ದಸ್ಕತ್ ತುಳು ಚಿತ್ರದ ಕನ್ನಡ ಆವೃತ್ತಿ ಮೇ 9ರಂದು ರಾಜ್ಯಾದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಅನಿಷ್ ಪೂಜಾರಿ ವೇಣೂರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ 3ನೇ ಅತ್ಯುತ್ತಮ ಚಿತ್ರಪ್ರಶಸ್ತಿ ಲಭಿಸಿದೆ ಎಂದರು.
ಜಗದೀಶ್ ಎನ್. ಅರೆಬೆನ್ನಿಮಂಗಲ ಅವರ ನಿರ್ಮಾಣದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ನಾನು ಮಾಡಿದ್ದೇನೆ. ನಾನು ಕಾಮಿಡಿ ಕಿಲಾಡಿ ವೇದಿಕೆಯಿಂದ ಬಂದು ಹಲವಾರು ಚಿತ್ರಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದು, ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ ಎಂದರು.
ಈ ಚಿತ್ರಕ್ಕೆ ಛಾಯಾಗ್ರಹಣವನ್ನು ಸಂತೋಷ್ ಆಚಾರ್ಯ ಗುಂಪಲಾಜೆ ಮಾಡಿದ್ದು, ಸಂಕಲನ ಗಣೇಶ್ ನೀಜಲ್, ಸಂಗೀತ ಸಮರ್ಥನ್ ಎಸ್.ರಾವ್, ಕಾರ್ಯಕಾರಿ ನಿರ್ಮಾಪಕರು ಪ್ರeಶ್ ಶೆಟ್ಟಿ, ಚಿತ್ರದ ನಾಯಕನಾಗಿ ದೀಕ್ಷಿತ್ ಕೆ ಅಂಡಿಂಜೆ, ನಾಯಕಿಯಾಗಿ ಭವ್ಯಪೂಜರಿ ನಟಿಸಿದ್ದು, ತಾರಾಗಣದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್‌ರಾಜ್ ಕಲ್ಕಂಜ, ನಿತಿಶ್ ಶೆಟ್ಟ, ಮನೋಜ್ ಆನಂದ್, ದೀಕ್ಷಿತ್ ಧರ್ಮಸ್ಥಳ, ರಕ್ಷಿತ್ ಜರಿಗೆದಡಿ, ಯುವಶೆಟ್ಟಿ, ಮೋಹನ್ ಶೆಣಿ, ಮಿಥುನ್‌ರಾಜ್, ದೀಪಕ್ ರೈ, ಚಂದ್ರಹಾಸ ಉಲ್ಲಾಳ, ಯೋಗೀಶ್ ಶೆಟ್ಟಿ, ನವೀನ್ ಬೊಂದೆಲ್ ಮತ್ತಿತರರಿದ್ದಾರೆ.

ಚಿತ್ರದ ಚಿತ್ರಿಕರಣ ಬೆಳ್ತಂಗಡಿ ತಾಲ್ಲೂಕಿನ ವೇಣೂರು, ನಾರಾವಿ, ಕೊಕ್ರಾಡಿ, ಅಂಡಿಂಜೆ ಮತ್ತಿತರ ಪ್ರದೇಶಗಳಲ್ಲಿ ಚಿತ್ರಿಕರಿಸಲಾಗಿದ್ದು, ಈ ಚಿತ್ರದಲ್ಲಿ ಮೂರು ಹಾಡುಗಳಿವೆ. ಪ್ರಾಕೃತಿಕ ಸೌಂದರ್ಯದ ನೈಜ್ಯ ಅಭಿನಯದ ಕರಾವಳಿ ಬದುಕು, ಸಂಸ್ಕತಿ ಸಂಘರ್ಷದ ಮನೋರಂಜನೆಯನ್ನೊಳಗೊಂಡ ಚಿತ್ರದ ಪ್ರಮುಖಾಂಶ ಆಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಘು, ಪುನೀತ್, ಹರ್ಷದ್, ದೀಕ್ಷಿತ್ ಮತ್ತಿತರರು ಇದ್ದರು.
