
ಶಿವಮೊಗ್ಗ :- ದೇಶದ ಪ್ರಸಿದ್ಧ ಯಾತ್ರಾಸ್ಥಳ ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಆವರಣ ದಲ್ಲಿ ಏ. ೧೮ರಿಂದ ೨೨ರ ವರೆಗೆ ನಡೆಯಲಿರುವ ಭರತನಾಟ್ಯ ಸ್ಪರ್ಧೆ ಹಾಗೂ ನೃತ್ಯ ಉತ್ಸವ ಕಾರ್‍ಯಕ್ರಮದಲ್ಲಿ ನಗರದ ಪ್ರತಿಷ್ಠಿತ ನೃತ್ಯ ಶಾಲೆಯಾದ ನಟನಂ ಕೇಂದ್ರದ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ನಟನಂ ಬಾಲ ನಾಟ್ಯ ಕೇಂದ್ರದ ೩೯ ಕಲಾವಿದರು ಪುರಿಗೆ ತೆರಳಲಿದ್ದು, ಕಾರ್ಯಕ್ರಮದ ಸಮಾರೋಪದಲ್ಲಿ ವಿಶೇಷವಾಗಿ ಜಪಾನಿನ ಫ್ಯಾನ್ ಡಾನ್ಸ್ ಮತ್ತು ಈಜಿಪ್ಟಿನ ವಿಂಗ್ ಡ್ಯಾನ್ಸ ನೃತ್ಯ ವನ್ನು ಅಭಿನಯಿಸ ಲಿದ್ದಾರೆ. ಈ ತಂಡದಲ್ಲಿ ವಿದ್ವಾನ್ ಚೇತನ್, ಶ್ರೀಮತಿ ವಿದುಷಿ ನಾಟ್ಯಶ್ರೀ ಚೇತನ್, ವಿದುಷಿ ಅಮೂಲ್ಯ, ಮಧುಮಿತ, ಕುಮಾರಿ ಜನ್ಯ, ಸುಜನ, ವೈಷ್ಣವಿ, ಕುಮಾರಿ ಪೂಜ, ಸಮನ್ವಿತ, ಕುಮಾರಿ ಸ್ಪೂರ್ತಿ ಹೂಗಾರ್, ಶ್ರೀಲಕ್ಷ್ಮೀ, ನೈದಿಲೆ, ತನಿಷ್ಕ, ಸ್ಪೂರ್ತಿ ಆರ್, ದೀಕ್ಷಾ, ಹರ್ಷಿತ, ಅನಿಂದಿತ, ಸಾನ್ವಿ ಎಸ್, ಅನನ್ಯ, ಧೃತಿ ಕೆ ಎಸ್, ತನುಶ್ರೀ, ಧೃತಿ ಆರ್.ಎನ್., ಸಾಧ್ವಿ, ಪ್ರತಿಕ್ಷ, ಸಾನ್ವಿ ಜಿ, ಪುಷ್ಪಿತ, ಕೇಂದ್ರದ ಮತ್ತೊಂದು ಶಾಖೆಯಾದ ಶ್ರೀ ಶಿವಾನಿ ಭರತ ನಾಟ್ಯ ಕಲಾಕೇಂದ್ರದ ನಿರ್ದೇಶಕರು ಶ್ರೀಮತಿ ವಿದುಷಿ ಚೈತ್ರ ಕಾರ್ತಿಕ, ಮಾಸ್ಟರ್ ಶಿವಾರ್ಯ, ಕುಮಾರಿ ಅನ್ವಿಕ, ಕುಮಾರಿ ಮಲ್ಯ, ಹಾಗೂ ಕಡೂರಿನ ಇನ್ನೊಂದು ಶಾಖೆಯಾದ ಶ್ರೀನಾಟ್ಯಕೇಶವ ಕಲಾನಿಕೇತನದಿಂದ ಕುಮಾರಿ ಸೌಮ್ಯ, ಪಾವನ, ಷಣ್ಮುಖಿ, ಮತ್ತು ಬೆಂಗಳೂರಿನ ನಾಟ್ಯಪ್ರಿಯ ಕಲಾನಿಕೇತನದ ನಿರ್ದೇಶಕಿ ವಿದುಷಿ ಸುಪ್ರಿಯ ಕಾರ್ತಿಕ್, ಕೃತಿಕಾ, ಶ್ರೇಯ ಇವರು ಅಭಿನಯಿಸಲಿದ್ದಾರೆ.
ತಂಡದ ನೇತೃತ್ವವನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ.ಎಸ್. ಕೇಶವ ಕುಮಾರ್ ಪಿಳ್ಳೈ ವಹಿಸುತ್ತಿದ್ದಾರೆ. ಕಾವ್ಯ ಮದನ್ ಹಾಗೂ ಚಂದ್ರಪ್ಪ ರವರು ಸಹಕರಿಸಲಿದ್ದಾರೆ.
