
ಶಿವಮೊಗ್ಗ :- ನಗರದ ದೂರ್ವಾಸ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಳದಲ್ಲಿ ಜ. ೧೪ರ ಇಂದು ಬೆಳಿಗ್ಗೆ ಶ್ರೀ ರಾಮತಾರಕ ಹೋಮ ಪೂಜೆಯು ಭಕ್ತಿಪೂರ್ವಕವಾಗಿ ನಡೆದಿದೆ.

ಇಂದು ರಾತ್ರಿ ದೇವರ ತೆಪ್ಪೋತ್ಸವವು ಅತ್ಯಂತ ವೈಭವದಿಂದ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ರಾರಾಜಿಸಲಿವೆ. ನಂತರ ನಡೆಯುವ ಸಿಡಿಮದ್ದು ಪ್ರದರ್ಶನ ನೋಡುಗರ ಗಮನ ಸೆಳೆಯಲಿದೆ.
ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಮಂಗಳವಾರ ಸಂಜೆಯಿಂದ ತುಂಗಾ ನದಿಯ ಸುತ್ತ ಮುತ್ತ ಜಮಾಯಿಸಲಿದ್ದಾರೆ. ಈ ಒಂದು ವೈಭವಪೂರ್ವ ತೆಪ್ಪೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತೆಪ್ಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ.