
ಶಿವಮೊಗ್ಗ :- ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಸಾಗರ ರಸ್ತೆ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8 ರಲ್ಲಿ ಭೂಗತ ಕೇಬಲ್ ಕಾಮಗಾರಿ ನಡೆಯತ್ತಿರುವುದರಿಂದ ಜ. 12ರ ನಾಳೆ ಬೆಳಿಗ್ಗೆ 9ಗಂಟೆಯಿಂದ ಸಂಜೆ 5.30ವರೆಗೆ ಶಿವಮೊಗ್ಗ ಶಿವಮೊಗ್ಗ ವಿನೋಬನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯಗಲಿದೆ.

ಲಕ್ಷ್ಮೀಪುರ ಬಡಾವಣೆ, ಎನ್‌ಎಂಸಿ ಕಾಂಪೌಂಡ್, ಎಸ್‌ಆರ್‌ಎಸ್ ಶಾಮಿಯಾನ, ಕೆಂಚಪ್ಪ ಬಡಾವಣೆ, ಸೂಡಾ ಕಛೇರಿ, ಪೊಲೀಸ್ ಚೌಕಿ, ವಿನೋಬನಗರ ಮುಖ್ಯ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರ ಉಪ ವಿಭಾಗ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
