google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನವಜಾತ ಶಿಶುವೊಂದನ್ನು ಕಟುಕ ತಾಯಿ ಕೈ ಚೀಲದಲ್ಲಿ ಹಾಕಿ ರಸ್ತೆ ಬದಿ ಇಟ್ಟು ಹೋಗಿದ್ದಾಳೆ. ಮಗುವನ್ನು ಗಮನಿಸಿದ ಸ್ಥಳೀಯರು ಕೂಡಲೆ ಮಕ್ಕಳು ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ-ಸಾಗರ ರಸ್ತೆಯ ಶ್ರೀರಾಮಪುರ ಬಳಿ ನವಜತ ಶಿಶು ಪತ್ತೆಯಾಗಿದೆ. ಒಂದು ದಿನದ ಹಿಂದಷ್ಟೆ ಜನಿಸಿರುವ ಮಗು ಎಂದು ಹೇಳಲಾಗುತ್ತಿದೆ. ವೃದ್ಧೆಯೊಬ್ಬರು ಮಗುವನ್ನು ರಕ್ಷಿಸಿ ಸ್ನಾನ ಮಾಡಿಸಿ, ರಕ್ಷಣೆ ಮಾಡಿದ್ದಾರೆ. ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಮಕ್ಕಳು ಮತ್ತು ಹೆರಿಗೆ ವಿಭಾಗಕ್ಕೆ ಮಗುವನ್ನು ದಾಖಲು ಮಾಡಲಾಗಿದೆ.ಚಿಕಿತ್ಸೆ ಮುಂದುವರೆದಿದೆ. ಸದ್ಯ ಮಗು ಆರೋಗ್ಯವಾಗಿದೆ.

ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ೬೦ ದಿನದವರೆಗೆ ಮಕ್ಕಳ ರಕ್ಷಣಾ ಇಲಾಖೆಯಲ್ಲಿ ಅದನ್ನು ಸಂರಕ್ಷಿಸಲಾಗುತ್ತದೆ. ಈ ಸಂದರ್ಭದಲ್ಲಿ ಪತ್ರಿಕಾ ಜಾಹಿರಾತು ಮತ್ತು ಪೊಲೀಸ್ ದೂರು ನೀಡಿ ಪೋಷಕರ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಪೋಷಕರು ಬರದೇ ಇದ್ದಲ್ಲಿ ಕಾನೂನಾತ್ಮಕ ದತ್ತು ಪ್ರಕ್ರಿಯೆ ಅಡಿಯಲ್ಲಿ ಮಗುವನ್ನು ರಕ್ಷಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.

Leave a Reply

Your email address will not be published. Required fields are marked *