google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಒಳ ಮೀಸಲಾತಿ ಜಾರಿ ವಿರೋಧಿಸಿ ಜಿಲ್ಲಾ ಬಂಜರ ಸಮಾಜ, ಬಂಜರ ಧರ್ಮಗುರುಗಳ ಮಹಾಸಭಾ ಹಾಗೂ ಜಿಲ್ಲೆಯ ಬಂಜರ ಸಮಾಜದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಬಂಜರ ಸಮಾಜದವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಒಳ ಮೀಸಲಾತಿಯನ್ನು ಜರಿ ಮಾಡಲು ಸರ್ಕಾರ ಹೊರಟಿದೆ. ಇದು ಬಂಜರ ಸಮುದಾಯಕ್ಕೆ ಕೊಡಲಿ ಪೆಟ್ಟು ನೀಡಲಿದೆ. ಯಾವುದೇ ಕಾರಣಕ್ಕೂ ಇದು ಜರಿಯಾಗಬಾರದು ಬಂಜರ ಸಮಾಜದವರು ಎಚ್ಚೆತ್ತುಕೊಳ್ಳಬೇಕಾಗಿದೆ. ಆದ್ದರಿಂದ ಜನ ಜಗೃತಿ ಅಭಿಯಾನದ ಮೂಲಕ ಸರ್ಕಾರಕ್ಕೆ ನಾವು ಒಳ ಮೀಸಲಾತಿ ಜರಿ ಮಾಡದಂತೆ ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಒಳ ಮೀಸಲಾತಿ ಜರಿಯಾಗುವುದರಿಂದ ವಿದ್ಯಾರ್ಥಿ ವೇತನ, ಉದ್ಯೋಗ ಸಿಗುವುದಿಲ್ಲ. ನಮ್ಮ ಸಮಾಜದ ನೌಕರ ವರ್ಗದವರಿಗೆ ಬಡ್ತಿಯೂ ಸಿಗುವುದಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಸ್ಥಗಿತಗೊಳ್ಳುತ್ತದೆ. ಇದು ನಮ್ಮ ಸಮುದಾಯಕ್ಕೆ ಮಾರಕವಾಗಿದೆ. ಇದರ ಹಿಂದೆ ಒಳ ಮೀಸಲಾತಿ ಜರಿಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಒಳ ಮೀಸಲಾತಿ ಬಗ್ಗೆ ವೈಜನಿಕ ಅಧ್ಯಯನ ನಡೆದಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ಜರಿಗೊಳಿಸಲು ತಂದ ಮಸೂದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬೇಕಾಗಿದೆ. ಆದ್ದರಿಂದ ಸೂಕ್ತ ಅಧ್ಯಯನ ಇಲ್ಲದೇ ಪರಿಶಿಷ್ಟ ಜತಿಗಳಲ್ಲಿ ಒಳ ಮೀಸಲಾತಿ ಜರಿಗೊಳಿಸಲು ನಡೆಯುತ್ತಿರುವ ಹುನ್ನಾರಗಳು ನಿಲ್ಲಬೇಕು. ಕೂಡಲೇ ಕರ್ನಾಟಕ ತಾಂಡಾ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಂಜರ ಧರ್ಮಗುರುಗಳ ಮಹಾಸಭಾದ ಸರ್ದಾರ್ ಸೇವಾಲಾಲ್ ಮಹಾಸ್ವಾಮಿ, ಸೈನಾ ಭಗತ್ ಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ, ದೇನಾ ಭಗತ್ ಸ್ವಾಮೀಜಿ, ಶಾಸಕಿ ಶಾರದಾ ಪೂರ್ಯಾನಾಯ್ಕ್, ಮುಖಂಡರಾದ ಶಶಿಕುಮಾರ್, ರೇಣುನಾಯ್ಕ್, ಗಣೇಶ್ ನಾಯ್ಕ್, ಹನುಮಂತ ನಾಯ್ಕ್, ನಾಗೇಶ್ ನಾಯ್ಕ್, ಆಯನೂರು ಶಿವಾನಾಯ್ಕ್, ಮುಂತಾದವರಿದ್ದರು.

Leave a Reply

Your email address will not be published. Required fields are marked *