Flowers in Chania

ಶಿವಮೊಗ್ಗ ವಿನೋದ್ ತಂಡದಿಂದ ಪ್ರಥಮ ಬಾರಿಗೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕಾರ್ಯಕ್ರಮ

ಶಿವಮೊಗ್ಗ :- ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಪ್ರಥಮ ಬಾರಿಗೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕಾರ್ಯಕ್ರಮವನ್ನು ಏ. 28ರಂದು ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಮುಖ್ಯ ಆಯೋಜಕ ಶಿವಮೊಗ್ಗ ವಿನೋದ್ ತಿಳಿಸಿದರು.

ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ದೇಶದಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದು ಕೇಂದ್ರ ಸರ್ಕಾರದ ಮಿನಿಸ್ಟರ್ರಿ ಆಫ್ ಬ್ರಾಡ್‌ಕಾಸ್ಟಿಂಗ್‌ನಿಂದ ಮಾನ್ಯತೆ ಪಡೆದಿದೆ. ಹಾಗೂ ಇಂಟರ್‌ನ್ಯಾಷನಲ್ ಸ್ಟ್ಯಾಡರ್‍ಡ್ ಬುಕ್ ನಂಬರ್‍ಸ್‌ನಲ್ಲಿ ನೊಂದಣಿಯಾಗಿರುತ್ತದೆ. ಈ ಸಂಸ್ಥೆಯು ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಂದ್ರ ಕಚೇರಿ ಹೊಂದಿದೆ. ಮುದ್ರಣ ಕಚೇರಿಯನ್ನು ತಮಿಳುನಾಡಿನ ಕೋಯಮತ್ತೂರ್‌ನಲ್ಲಿ ಹೊಂದಿದ್ದು, ವಿಶೇಷ ಸಾಧನೆ ತೋರುವ ಹಾಗೂ ವೈಶಿಷ್ಟ್ಯತೆ ಇರುವ ವ್ಯಕ್ತಿಯನ್ನು ಪ್ರಶಂಸಿ ಪ್ರಬ್ಲಿಕೇಷನ್ ಮಾಡುತ್ತದೆ ಎಂದರು.

ಶಿವಮೊಗ್ಗದಲ್ಲಿ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವ ಜನರು ಹಾಗೂ ವೈಶಿಷ್ಟ್ಯತೆಯನ್ನು ಹೊಂದಿರುವ ವ್ಯಕ್ತಿಗಳು ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ಭಾಗವಹಿಸಲು ಇಚ್ಛಿಸುವರು ಏ.೨೦ರ ಒಳಗಾಗಿ ಮೊ. 9900939653ರಲ್ಲಿ ಆಯೋಜಕರನ್ನು ಸಂಪರ್ಕಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ೨೦ಸಾಧಕರಿಗೆ ಮಾತ್ರ ಅವಕಾಶವಿದೆ ಎಂದರು.

ಅಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮವನ್ನು ಶಿವಮೊಗ್ಗದ ಖ್ಯಾತ ಚೆಸ್ ಪಟು ಹಾಗೂ ಏಷಿಯನ್ ಪ್ಯಾರಾ ಗೇಮ್ಸ್ ಪದಕ ವಿಜೇತ ಕಿಶನ್ ಗಂಗೊಳ್ಳಿ ಉದ್ಘಾಟಿಸಲಿದ್ದು, ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ರಾಜ್ಯ ನಿರ್ದೇಶಕ ಡಾ. ಎಸ್.ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮೀನಾಕ್ಷಿ, ಶಶಿಕುಮಾರ್, ಶರವಣ, ಶರತ್, ಬಾಲರಾಜ್, ಹರ್ಷಿತ್, ಶ್ರೇಯಸ್ ಇನ್ನಿತರರು ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *