ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಶ್ರೀಮಂತರೇ ಶ್ರೀಮಂತರಾಗುತ್ತ ಹೋಗುತ್ತಿದ್ದಾರೆ : ಹನುಮಂತಯ್ಯ

ಶಿವಮೊಗ್ಗ :- ಬಡವರ ಬದುಕಿಗೆ ಭದ್ರತೆ ನೀಡದ ಬಿಜೆಪಿ ಅತ್ಯಂತ ಕ್ರೂರ ಸರ್ಕರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಬಡವರ ಬದುಕಿಗೆ ಬೆಲೆ ನೀಡುವುದಿಲ್ಲ. ಶ್ರೀಮಂತರನ್ನು ಸಾಕುವ ಆಶ್ರಯತಾಣವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಶ್ರೀಮಂತರೇ ಶ್ರೀಮಂತರಾಗುತ್ತ ಹೋಗುತ್ತಿದ್ದಾರೆ. ಬಹುಸಂಖ್ಯಾತರ ಪರವಾಗಿ ಬಿಜೆಪಿ ಸರ್ಕಾರ ಇರಲಿಲ್ಲ. ಬಿಜೆಪಿ ಕ್ರೌರ್ಯದ ಸರ್ಕಾರ ಎಂದು ದೂರಿದರು.

ಆರ್ಥಿಕತೆಯ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ ಕೆಳವರ್ಗದವರ ಸಂಪತ್ತು ಎಷ್ಟಿದೆ ಎಂದು ತಿಳಿದುಕೊಳ್ಳಲು ಆದಾಯ ಅಸಮಾನತೆಯ ಬಗ್ಗೆ ಮಾತನಾಡಲಿ, ಭಾರತದ ಆರ್ಥಿಕತೆ ಎಂದರೆ ಅದು ಸಹಜವಾಗಿ ಅಭಿವೃದ್ಧಿಯಾಗುವ ನಿಟ್ಟಿನಂತ ಸಾಗುತ್ತದೆ. ಅದನ್ನೇ ನಾನು ಮಾಡಿದ್ದು ಎಂದು ಮೋದಿ ಹೇಳುತ್ತಿರುವುದು ಎಷ್ಟು ಸತ್ಯ ಎಂದು ಪ್ರಶ್ನೆ ಮಾಡಿದರು.

ಕಳೆದ ೧೦ ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದ ಬಡವರ, ಆದಿವಾಸಿಗಳ, ದಲಿತರ ಪರವಾದ ಒಂದೇ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಕೊಟ್ಟಿಲ್ಲ. ಎಲೆಕ್ಟ್ರೋಲ್ ಬಾಂಡ್ ಜಗತ್ತಿನ ದೊಡ್ಡ ಹಗರಣ, ಐಟಿ,ಇಡಿ, ಸಿಬಿಐನಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟರಿಂದ ಕೋಟ್ಯಾಂತರ ರೂಪಾಯಿಗಳ ಹಫ್ತಾವಸೂಲಿ ಮಾಡಿಕೊಳ್ಳುವ ಹಫ್ತಾವಸೂಲಿ ರಾಜಕಾರಣವನ್ನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಹತ್ತು ವರ್ಷಗಳ ತನ್ನ ಆಡಳಿತದ ಸಾಧನೆಯ ದಾಖಲೆ ಬಿಡುಗಡೆ ಮಾಡಲಿ, ನರೇಗಾ, ಆಹಾರ ಹಕ್ಕು ಅಧಿನಿಯ, ಅರಣ್ಯ ಹಕ್ಕು ಅಧಿನಿಯಮದಂತಹ ಜನಪರ ಕಾಯ್ದೆಗಳನ್ನು ಯುಪಿಎ ಸರ್ಕಾರ ತಂದಿತ್ತು. ಇಂತಹ ಒಂದೇ ಒಂದು ಕಾಯ್ದೆ ಮೋದಿ ತಂದಿದ್ದಾರೆಯೇ? ಈಗ ಬಿಡುಗಡೆ ಮಾಡಿರುವ ಪ್ರನಾಳಿಕೆಯಲ್ಲಿ ಜನಸಾಮಾನ್ಯರ ಪರವಾಗಿ ಒಂದಾದರೂ ಕಾರ್ಯಕ್ರಮಗಳಿವೇಯೇ ? ದೇಶದಲ್ಲಿ ಆರ್ಥಿಕ ಅಸಮಾನತೆ ಎದ್ದು ಕಾಣುತ್ತಿದೆ. ಮೋದಿ ಅವರ ಆರ್ಥಿಕ ನೀತಿ ಶ್ರೀಮಂತರ ಪರವಾಗಿದೆ ಎಂದು ಲೇವಡಿ ಮಾಡಿದರು.

ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ಅವರು ಹೇಳುತ್ತಿರುವಾಗಲೆ ಅತ್ತ ಉತ್ತರ ಭಾರತದಲ್ಲಿ ಅವರದ್ದೇ ಪಕ್ಷದ ಅಭ್ಯರ್ಥಿಯೊಬ್ಬರು ಬಿಜೆಪಿಗೆ ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಅವರ ವಿರುದ್ದ ಯಾಕೆ ಮೋದಿ ಕ್ರಮ ಕೈಗೊಳ್ಳುವುದಿಲ್ಲ ಯಾಕೆ ಕಾಂಗ್ರೇಸ್ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುವ ಬದ್ದತೆಯನ್ನು ತೋರಿದೆ ಎಂದರು.

ಬಂಗಾರಪ್ಪ ಈ ನಾಡು ಕಂಡ ಅಪ್ರತಿಮ ನಾಯಕ, ಅವರು ಕೊಟ್ಟ ಯೋಜನಗೆಳು ಬಡವರು, ದಲಿತರು, ಹಿಂದುಳಿದವರ್ಗಗಳ ಪಾಲಿಗೆ ವರದಾನವಾಗಿದ್ದವರು ಅಂತಹ ನಾಯಕರ ಮಗಳು ಶ್ರೀಮತಿ ಗೀತಾಶಿವರಾಜಕುಮಾರ್ ಅವರು ಶಿವಮೆಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದಾರೆ.ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೇಸ್ ಕೈ ಬಲಪಡಿಸಬೇಕೆಂದು ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಟಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್. ಹಿರಿಯ ಮುಖಂಡರಾದ ಎಂ.ಶ್ರೀಕಾಂತ್, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಶಿವಣ್ಣ, ಪ್ರಚಾರಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಎಲ್. ಪದ್ಮನಾಭ್, ಶಿವಾನಂದ, ಮತ್ತಿರರರು ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *