Flowers in Chania

ಭೀಕರ ಅಪಘಾತದಲ್ಲಿ ಸೂರಗೊಂಡನಕೊಪ್ಪದ ಯುವಕ ಸೇರಿ ಹರಮಘಟ್ಟದ ಇಬ್ಬರು ಸಾವು

ಶಿವಮೊಗ್ಗ :- ಒಮಿನಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿಘಟನೆಯಲ್ಲಿ ಒಮಿನಿಯಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಿನ್ನಿಕಟ್ಟೆ ಬಿದರಹಳ್ಳಿ ನಡುವಿನ ಮಾರ್ಗದ ನಡುವೆ ಈ ಘಟನೆ ನಡೆದಿದೆ.

ಘಟನೆಯಲ್ಲಿ ಬಸ್‌ನಲ್ಲಿದ್ದವರಿಗೂ ಗಾಯವಾಗಿದ್ದು ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇನ್ನು ಒಮಿನಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹರಮಘಟ್ಟದವರು ಇನ್ನೋರ್ವಯುವಕ ಸೂರಗೊಂಡನಕೊಪ್ಪದವನು ಎಂದು ತಿಳಿದುಬಂದಿದ್ದು, ಅವರೆಲ್ಲರೂ ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಮೃತರನ್ನ ನಜುಂಡಪ್ಪ, ರಾಕೇಶ್, ದೇವರಾಜ್ ಎಂದು ಗುರುತಿಸಲಾಗಿದೆ. ಒಮಿನಿಯಲ್ಲಿದ್ದ ಇನ್ನೊಬ್ಬರಿಗೂ ಗಂಭೀರವಾದ ಗಾಯವಾಗಿದ್ದು ಅವರನ್ನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಬಸ್ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದ್ದು, ಬಸ್‌ನ ಮುಂದಿನ ಚಕ್ರ ಕಳಚಿದೆ. ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ಒಮಿನಿ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ.

Abhi

Abhi

Leave a Reply

Your email address will not be published. Required fields are marked *