Flowers in Chania

ಶ್ರೀಕ್ಷೇತ್ರ ಪುಷ್ಪಗಿರಿ ಸಂಸ್ಥೆಯಿಂದ ಸ್ವಸಹಾಯ ಸಂಘಗಳ ಬೃಹತ್ ಮಹಿಳಾ ಸಮಾವೇಶ : ಸ್ವಾಮೀಜಿ ವಿವರಣೆ

ಶಿವಮೊಗ್ಗ :- ಸ್ವಾವಲಂಭಿ ಹಾಗೂ ಸ್ವಾಭಿಮಾನದಿಂದ ಮಹಿಳೆಯರು ಬದುಕಬೇಕೆಂಬ ಉದ್ದೇಶದಿಂದ ಶಿಕಾರಿಪುರದಲ್ಲಿ ಫೆ. 11ರಂದು ಹೊಸ ಸಂತೆ ಮೈದಾನದಲ್ಲಿ ಸಂಜೆ 5ಕ್ಕೆ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ರಾಜ್ಯ ಮಟ್ಟದ ಪುಷ್ಪಗಿರಿ ಮಹಿಳಾ ಸ್ವ-ಸಹಾಯ ಸಂಘಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪುಷಷ್ಟಗಿರಿ ಕ್ಷೇತ್ರವು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಕಳೆದ ೩ ವರ್ಷಗಳ ಹಿಂದೆ ಮಹಿಳಾ ಸ್ವ-ಸಹಾಯ ಸಂಘಗಳನ್ನು ಹುಟ್ಟುಹಾಕಿತ್ತು. ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಅವರ ಬದುಕನ್ನು ಹಸನಗೊಳಿಸುವ ಆರ್ಥಿಕ ಶಕ್ತಿ ನೀಡುವ ಹಿನ್ನಲೆಯಲ್ಲಿ ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಲಾಗಿದೆ. ಇದು ಜತಿ,ಮತ,ಧಮಗಳನ್ನು ಮೀರಿ ಸಮಾಜದಲ್ಲಿ ಒಳ್ಳೆಯ ಭಾವನೆಗಳನ್ನು ಬೆಳೆಸುವ ಮತ್ತು ಮನಸ್ಸುಗಳನ್ನು ಕಟ್ಟುವ ಹಿನ್ನಲೆಯಲ್ಲಿ ಶ್ರೀಕ್ಷೇತ್ರ ಈ ಐತಿಹಾಸಿಕ ಕಾರ್ಯಕ್ರಮಗಳನ್ನು ಶಿವಮೊಗ್ಗದಲ್ಲಿ ಹಮ್ಮಿಕೊಂಡಿದೆ ಎಂದರು.

ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಗ ಸಂಘ, ಯುವ ರೈತ ಸಂಘಗಳನ್ನು ಈ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ತರಲಾಗುವುದು. ಜೊತೆಗೆ ಯುವಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ ಮತ್ತು ಕೃಷಿ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ ಎಂದರು.

ಅಂದು ೩ ಗಂಟೆಗೆ ಶಿಕಾರಿಪುರದಲ್ಲಿ ಮೆರವಣಿಗೆ ಕೂಡ ನಡೆಯಲಿದೆ. ನಂತರ ೫ ಗಂಟೆಗೆ ಹೊಸ ಸಂತೆ ಮೈದಾನದಲ್ಲಿ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸುವರು. ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು, ರಾಜಕಾರಣಿಗಳು, ಗಣ್ಯರು, ಚಲನಚಿತ್ರ ನಟ-ನಟಿಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವರು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಡಾ. ಧನಂಜಯ ಸರ್ಜಿ, ನಾಗಯ್ಯ, ಪಿ.ರುದ್ರೇಶ್, ಜೈರಾಜ್, ಡಾ.ಶೇಖರ್, ಬಿ.ಡಿ.ಭೂಕಾಂತ್, ಗಜೇಂದ್ರಪ್ಪ, ಸಿದ್ದನಗೌಡ ಮುಂತಾದವರು ಇದ್ದರು.

Abhi

Abhi

Leave a Reply

Your email address will not be published. Required fields are marked *