Flowers in Chania

ಯುವ ನಿಧಿ ಯೋಜನೆ ಜಾಗೃತಿ ಕಾರ್ಯಕ್ರಮ : ಯೋಗೀಶ್ ವಿವರಣೆ

ಶಿವಮೊಗ್ಗ :- ರಾಜ್ಯ ಸರ್ಕಾರದ ೫ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಗೆ ಮುಖ್ಯಮಂತ್ರಿ ಗಳು ಈಗಾಗಲೇ ಚಾಲನೆ ನೀಡಿದ್ದು, ಶಿವಮೊಗ್ಗದಲ್ಲಿಯೂ ಸಹ ಈ ಬಗ್ಗೆ ಅರಿವು ಮೂಡಿಸಲು ನಾಳೆ ಡಿವಿಎಸ್ ಸರ್ಕಲ್‌ನಲ್ಲಿ ನೊಂದಣಿ ಮಾಡಿಕೊಳ್ಳಲು ಜಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೀಶ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಬಿಜೆಪಿ ಯವರ ಆರೋಪಗಳ ನಡುವೆಯೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯತ್ತ ಸಾಗಿದೆ. ಅದರ ಮುಂದುವರೆದ ಭಾಗವಾಗಿ ಈ ೫ನೇ ಯೋಜನೆಯಾಗಿರುವ ಯುವನಿಧಿ ಯೋಜನೆಯನ್ನು ಕೂಡ ಈಗಾಗಲೇ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ಯೋಜನೆಗಾಗಿ ಅರ್ಜಿ ಹಾಕಲು ಈಗಾಗಲೇ ನೊಂದಣಿ ಕಾರ್ಯ ಆರಂಭವಾಗಿದೆ. ೨೦೨೩ರಲ್ಲಿ ಪದವಿ ಪಡೆದ ಹಾಗೂ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿ ಯುವಕರು ಇದರ ಅವಕಾಶವನ್ನು ಬಳಸಿಕೊಳ್ಳಬೇಕು. ಈ ಬಗ್ಗೆ ಜಗೃತಿ ಮೂಡಿಸಲು ಜಿಲ್ಲಾ ಕಾಂಗ್ರೆಸ್ ಕಾರ್ಯಕತರು, ಮುಖಂಡರು ಶ್ರಮಿಸುತ್ತಿದ್ದಾರೆ. ಡಿವಿಎಸ್ ಕಾಲೇಜಿನಿಂದ ಡಿ. ೨೮ರ ನಾಳೆ ಬೆಳಿಗ್ಗೆ ೧೧ಕ್ಕೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದೆಂದರು.

ಹಾಗೆಯೇ ಈ ಯೋಜನೆ ಶಿವಮೊಗ್ಗದಿಂದಲೇ ಆರಂಭವಾU ಲಿದೆ ಎಂಬ ಮಾಹಿತಿ ಸಿಕ್ಕಿದೆ. ಜ. ೧೨ರ ವಿವೇಕಾನಂದ ಜಯಂತಿ ದಿನವೇ ಈ ಯೋಜನೆ ಜರಿಗೆ ಬರಲಿದೆ. ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಇದನ್ನು ಉದ್ಘಾಟಿಸಲಿದ್ದಾರೆ. ಇದು ನಿರಂತರ ಯೋಜನೆಯಾಗಿದ್ದು, ಎಲ್ಲಾ ಗ್ಯಾರಂಟಿಗಳಂತೆ ಇದು ಕೂಡ ಯಶಸ್ವಿಯಾಗಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಮತ್ತು ಕೊಟ್ಟ ಭರವಸೆಗಳನ್ನು ಈಡೇರಿಸಿದ ಸರ್ಕಾರವಾಗಿದೆ ಎಂದರು.

ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಕಳಪೆಯಾಗಿವೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಮೇಶ್ ಹೆಗ್ಡೆ, ಎಸ್.ಟಿ. ಹಾಲಪ್ಪ, ಯಮುನಾ ರಂಗೇಗೌಡ, ವೈ.ಬಿ. ಚಂದ್ರಕಾಂತ್, ಸೌಗಂಧಿಕ, ಮೇಹಕ್ ಷರೀಪ್, ವಿಶ್ವನಾಥ್ ಕಾಶಿ, ಶಿವಕುಮಾರ್, ಕುಮಾರ್, ಚರಣ್ ಇನ್ನಿತರರಿದ್ದರು.

Abhi

Abhi

Leave a Reply

Your email address will not be published. Required fields are marked *