Flowers in Chania

5, 8, 9ನೇ ತರಗತಿ ಮಕ್ಕಳ ಪಬ್ಲಿಕ್ ಪರೀಕ್ಷೆಗೆ ತಾತ್ಕಾಲಿಕ ವೇಳ ಪಟ್ಟಿ ಬಿಡುಗಡೆ

ಬೆಂಗಳೂರು :- ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ 5, 8, 9ನೇ ತರಗತಿ ಮಕ್ಕಳಿಗೆ 2023 -24ನೇ ಸಾಲಿನ ಸಂಕಲನಾತ್ಮಕ ಮೌಲ್ಯಾಂಕನ (ಎಸ್‌ಎ-2) ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

2024ರ ಮಾರ್ಚ್ 11 ರಿಂದ 18 ರವರೆಗೆ ಪಬ್ಲಿಕ್ ಪರೀಕ್ಷೆ ನಡೆಯಲಿದೆ.ಕಳೆದ ವರ್ಷ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ಆರಂಭಿಸಿದ್ದ ಸರ್ಕಾರ, ಈ ವರ್ಷ 9ನೇ ತರಗತಿ ಮಕ್ಕಳಿಗೂ ಇದನ್ನು ವಿಸ್ತರಿಸಿದ್ದು, ತರಗತಿವಾರು ವೇಳಾಪಟ್ಟಿ ಪ್ರಕಟಿಸಲಾಗಿದೆ.

https://kseab.karnataka.gov.in ವೆಬ್ಸೈಟ್ ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ.

5ನೇ ತರಗತಿ

ಮಾರ್ಚ್ 11ರಿಂದ 14 ರವರೆಗೆ ಐದನೇ ತರಗತಿ ಪರೀಕ್ಷೆ ನಡೆಯಲಿದೆ. ಮಾರ್ಚ್ 11 ಪ್ರಥಮ ಭಾಷೆ, ಮಾರ್ಚ್ 12 ದ್ವಿತೀಯ ಭಾಷೆ, ಮಾರ್ಚ್ 13 ಪರಿಸರ ಅಧ್ಯಯನ, ಮಾರ್ಚ್ 14 ಗಣಿತಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿದ್ದು, ಎಲ್ಲಾ ಪರೀಕ್ಷೆಗಳು ಮಧ್ಯಾಹ್ನ 2:30 ರಿಂದ ಸಂಜೆ 4:30ರ ವರೆಗೆ ನಡೆಯಲಿವೆ.

8 ಮತ್ತು 9ನೇ ತರಗತಿ

8 ಮತ್ತು 9ನೇ ತರಗತಿ ಪರೀಕ್ಷೆಗಳು ಮಾರ್ಚ್ 11 ರಿಂದ ಆರಂಭವಾಗಲಿದೆ. ಮಾರ್ಚ್ 11 ಪ್ರಥಮ ಭಾಷೆ, ಮಾರ್ಚ್ 12 ದ್ವಿತೀಯ ಭಾಷೆ, ಮಾರ್ಚ್ 13 ತೃತೀಯ ಭಾಷೆ, ಮಾರ್ಚ್ 14 ಗಣಿತ, ಮಾರ್ಚ್ 15 ರಂದು ವಿಜ್ಞಾನ, ಮಾ. 16ರಂದು ಸಮಾಜ ವಿಜ್ಞಾನ, ಮಾರ್ಚ್ 18ರಂದು ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿದೆ. ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆವರೆಗೆ ಪರೀಕ್ಷೆಗಳು ನಡೆಯುತ್ತವೆ. ಮಂಡಳಿಯಿಂದಲೇ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಕೊಡಲಾಗುವುದು ಎಂದು ಹೇಳಲಾಗಿದೆ.

Abhi

Abhi

Leave a Reply

Your email address will not be published. Required fields are marked *