Flowers in Chania

ಶಿವಮೊಗ್ಗ:ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ನೆರವಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಇಂದು ಜಿಲಾ್ಲಧಿಕಾರಿಗಳ ಕಚೇರಿಎದುರು ಧರಣಿ ನಡೆಸಿ ಜಿಲಾ್ಲಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಸರ್ಕಾರ ಈಗಾಗಲೇ 130 ತಾಲೂಕುಗಳನ್ನು ಬರ ಪ್ರದೇಶವೆಂದು ಘೋಷಿಸಲು ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ರಾಜ್ಯ ಸರ್ಕಾರಕಕ್ೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರನ್ನು ರಕ್ಷಿಸಬೇಕು. ಎನ್‌ಡಿಆರ್‌ಎಫ್‌ ನೀತಿಯನ್ನು ಬದಲಾಯಿಸಬೇಕು. ಉದ್ಯೀಗ ಖಾತ್ರಿ ಯೋಜನೆಗೆ ಒತ್ತು ಕೊಡಬೇಕು. ಅಂತರ್‌ ಜಲ ವೃದ್ಧಿಗೆ ನೆರವು ನೀಡಬೇಕು. ರೈತರ ಸಾಲ ಮನಾ್ನ ಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಕಾವೇರಿ ಜಲ ವಿವಾದಕಕ್ೆ ಸಂಬಂಧಿಸಿದಂತೆ ನಾ್ಯಯಾಲಯವಾಗಲಿ, ನಾ್ಯಯಮಂಡಳಿಯಾಗಲಿ ಸ್ಪಷ್ಟವಾದ ಮಾನದಂಡ ರೂಪಿಸಿಲ್ಲ. ಮಳೆ ಕೊರತೆಯ ಸಂದರ್ಭದಲ್ಲಿ ವಿವಾದ ಹೆಚಾ್ಚಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರ ಇಂತಹ ಸಂದರ್ಭದಲ್ಲಿ ಸೂಕ್ತ ಸಂಕಷ್ಟ ಸೂತ್ರವನ್ನು ರೂಪಿಸಬೇಕು ಎಂದು ಒತಾ್ತಯಿಸಿದರು.

ಕಬ್ಬು ಬೆಲೆ ನಿಗದಿಗೆ ಕೇಂದ್ರ ಸರ್ಕಾರ ಶೇ.10.25 ಇಳುವರಿಯನ್ನು ಆಧಾರವಾಗಿಟ್ಟುಕೊಂಡಿದೆ. ಇದನ್ನು ಮಾರ್ಪಾಡು ಮಾಡಿ ಶೇ.8.5ಕಕ್ೆ ಇಳಿಸಬೇಕು. ತೆಂಗು ಬೆಳೆಗಾರರ ನೆರವಿಗೆ ಬರಬೇಕು. ಕೊಬ್ಬರಿಗೆ ಕ್ವಿಂಟಾಲಿಗೆ ಬೆಂಬಲ ಬೆಲೆಯನ್ನು 20 ಸಾವಿರಕಕ್ೆ ಹೆಚ್ಚಿಸಬೇಕು. ಜಿಲ್ಲೆಯ ಎಲಾ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎನ್‌.ಡಿ. ವಸಂತಕುಮಾರ್‌, ಶಿವಾನಂದ ಕುಗ್ವೆ, ಕಣ್ಣಪ್ಪ, ರಮೇಶ್‌ ಐಗಿನಬೈಲು, ಪ್ರೇಮಾ ಎನ್‌., ಜಯಲಕ್ಷ್ಮೀ ಲತಾ, ನಂದಿನಿ, ಯು.ಬಿ. ಜೋಸೆಫ್‌, ಎಂ.ಬಿ. ಮಂಜಪ್ಪ, ಇದ್ದರು.

Abhi

Abhi

Leave a Reply

Your email address will not be published. Required fields are marked *