google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಪ್ರತಿಷ್ಠಿತ ಶ್ರೀ ರಾಘವೇಂದ್ರ ಯೋಗ ಕೇಂದ್ರ ಹಾಗು ಪತಂಜಲಿ ಯೋಗ ಸಮಿತಿಯಿಂದ ಜ. 25ರ ಭಾನುವಾರ ಬೆಳಿಗ್ಗೆ 5.30ರಿಂದ 7.30ರವರೆಗೆ ವೀರಶೈವ ಕಲ್ಯಾಣ ಮಂದಿರದಲ್ಲಿ ಸೂರ್ಯ ನಮಸ್ಕಾರ ಯಜ್ಞವನ್ನು ಆಯೋಜಿಸಲಾಗಿದೆ.

ಸೂರ್ಯ ದೇವನನ್ನು ಆರಾಧಿಸುವ ದಿನ ರಥಸಪ್ತಮಿ ನಿಮಿತ್ತ 108 ಸೂರ್ಯ ನಮಸ್ಕಾರ ಯಜ್ಞ ನಡೆಯಲಿದೆ. ಕೇಂದ್ರದ ಎಲ್ಲಾ ಯೋಗ ಬಂದುಗಳು ಹಾಗೂ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು, ಸಕಾಲದಲ್ಲಿ ಭಾಗವಹಿಸಿ ಯಜ್ಞವನ್ನು ಯಶಸ್ವಿ ಗೊಳಿಸಲು ಕೇಂದ್ರದ ಯೋಗ ಸಾಮ್ರಾಟ್ ಗೋಪಾಲಕೃಷ್ಣ ಅವರು ವಿನಂತಿಸಿದ್ದಾರೆ.

ಈ ಅಂಗವಾಗಿ ಜ. 22ರ ನಾಳೆಯಿಂದ ಜ. 24ರವರೆಗೆ ಬೆಳಿಗ್ಗೆ ಮತ್ತು ಸಂಜೆ ಯೋಗ ಕ್ಲಾಸ್ ಸಮಯದಲ್ಲಿ ಉಚಿತವಾಗಿ ಸೂರ್ಯ ನಮಸ್ಕಾರ ಹೇಳಿ ಕೊಡಲಾಗುತ್ತಿದೆ. ಆಸಕ್ತರು ಮಾಹಿತಿಗೆ ಗೋಪಾಲಕೃಷ್ಣ ಮೊ. 9448414849, ಶಶಿ ಮಳಿ ಮೊ. 9742339404ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *