Flowers in Chania

ಮುಂಗಾರು ಚುರುಕು : ಅಲ್ಲಲ್ಲಿ ಮನೆ ಕುಸಿತ

ಹೊಸನಗರ : ತಾಲ್ಲೂಕಿನಾದ್ಯಂತ ಅಬ್ಬರದ ಮಳೆ ಆರಂಭವಾಗಿದ್ದು ಹೊಸನಗರದಲ್ಲಿ ಗುರುವಾರ ಬೆಳಿಗ್ಗೆ (ಕಳೆದ 24 ಗಂಟೆಗಳಲ್ಲಿ) ವರದಿಯ ಪ್ರಕಾರ 130.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

ತಾಲ್ಲೂಕಿನ ಕೊಳಗಿ ಗ್ರಾಮದಲ್ಲಿ ಜ್ಯೋತಿ ಕೋಂ ಲೋಕಪ್ಪ‌ಎಂಬುವವರ ಮನೆ ಕುಸಿತ ಕಂಡಿದ್ದು ಸುಮಾರು ಅಂದಾಜು 1 ಲಕ್ಷ ರೂ. ನಷ್ಟು ನಷ್ಟ ಉಂಟಾಗಿದ್ದು ಇದನ್ನು ಬಿಟ್ಟರೆ ಬೇರೆ ಯಾವುದೇ ಅನಾಹುತವಾದ ವರದಿ ಹೊಸನಗರ ತಾಲ್ಲೂಕಿನಲ್ಲಿ ಆಗಿಲ್ಲ.

ಪರಿಶೀಲನೆ:

ಕೊಳಗಿ ಗ್ರಾಮದ ಜ್ಯೋತಿ ಲೋಕಪ್ಪನವರ ಮನೆ ಮಳೆಯ ರಭಸಕ್ಕೆ ಕುಸಿದಿದ್ದು ತಕ್ಷಣ ಸ್ಪಂದಿಸಿದ ಅಲ್ಲಿನ ಗ್ರಾಮ ಆಡಳಿತಾಧಿಕಾರಿ ಸಿದ್ದಪ್ಪನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ತಯಾರಿಸಿ ತಾಲ್ಲೂಕು ಕಛೇರಿಯ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕಾಗಿ ವರದಿ ನೀಡಿದರು.

ಅಧಿಕಾರಿಗಳು ಸೂಕ್ತ ಸಂದರ್ಭದಲ್ಲಿ ಸ್ಪಂದಿಸಿ:

ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ಯಾವುದೇ ಸಂದರ್ಭದಲ್ಲಿಯಾದರೂ ಅನಾಹುತವಾಗುವ ಸಂದರ್ಭದಲ್ಲಿ ತಾಲ್ಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದ್ದು ಯಾವುದೇ ಸಂದರ್ಭದಲ್ಲಿಯಾದರೂ ದೂರವಾಣಿ ಕರೆಗಳು ಬಂದರೇ ತಕ್ಷಣ ಸ್ಪಂದಿಸಬೇಕು ಹಾಗೂ ಸೂಕ್ತ ವರದಿಯನ್ನು ತಾಲ್ಲೂಕು ಕಛೇರಿಗೆ ತಲುಪಿಸಬೇಕೆಂದು ಹೊಸನಗರದ ತಹಶೀಲ್ದಾರ್ ಧಮಾಂತ ಗಂಗಾಧರ್ ಕೋರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Abhi

Abhi

Leave a Reply

Your email address will not be published. Required fields are marked *