Flowers in Chania

ತುಂಗಾ ರಿವರ್ ಫ್ರಂಟ್ ಯೋಜನೆ ಫೆ.23 ರಿಂದ ಪ್ರಾಯೋಗಿಕವಾಗಿ ಸಾರ್ವಜನಿಕರಿಗೆ ಉಚಿತ ಪ್ರವೇಶ

ಶಿವಮೊಗ್ಗ :- ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಟಾನಗೊಳಿಸಿರುವ ಬಹು ನಿರೀಕ್ಷಿತ ‘ತುಂಗಾ ನದಿ ಉತ್ತರ ದಂಡೆ ಅಭಿವೃದ್ದಿ ಯೋಜನೆ’ ಯನ್ನು ಫೆ. 23 ರಿಂದ ಮಾ. 3 ರವರೆಗೆ ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ಉಚಿತ ಪ್ರವೇಶ ಮೂಲಕ ವೀಕ್ಷಣೆಗಾಗಿ ನೀಡಲಾಗುವುದು.

ಪ್ರವೇಶ ದ್ವಾರ ಸಂಖ್ಯೆ : 2 ಇಮಾಂಬಡ, ಬಿಬಿ ರಸ್ತೆ, ಪ್ರವೇಶ ದ್ವಾರ ಸಂಖ್ಯೆ: 5 ರಾಮಣ್ಣ ಶ್ರೇಷ್ಟಿ ಪಾರ್ಕ್ ಪಕ್ಕ, ಗಾಂಧಿ ಬಜಾರ್, ಪ್ರವೇಶ ದ್ವಾರ ಸಂಖ್ಯೆ : 9 ಬಿಸಿಎ ಹಾಸ್ಟೆಲ್ ಪಕ್ಕ, ಎಸ್‍ಪಿಎಂ ರಸ್ತೆ ಮೂಲಕ ಬೆಳಿಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೆ ಪ್ರವೇಶ ಸಮಯವಾಗಿರುತ್ತದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Abhi

Abhi

Leave a Reply

Your email address will not be published. Required fields are marked *