Flowers in Chania

ಸಿದ್ಧತೆ ಇಲ್ಲದೆ ಪರೀಕ್ಷೆ ಬರೆಯಲು ಹೋದರೆ ಒತ್ತಡ ಸಹಜ : ವಿದ್ಯಾರ್ಥಿಗಳಿಗೆ ಸಂವಾದದಲ್ಲಿ ಅತ್ಯುನ್ನತ ಮಾಹಿತಿ ನೀಡಿದ ಡಾ| ಶುಭ್ರತಾ

ಶಿವಮೊಗ್ಗ :- ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ. ಸಿದ್ಧತೆ ಇಲ್ಲದೆ ಪರೀಕ್ಷೆ ಬರೆಯಲು ಹೋದರೆ ಒತ್ತಡ ಹೆಚ್ಚಾಗುವುದು ಸಹಜ ಎಂದು ಖ್ಯಾತ ಮನೋ ವೈದ್ಯೆ ಮನೋವೈದ್ಯೆ ಡಾ| ಕೆ.ಎಸ್. ಶುಭ್ರತಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಕ್ಷೇಮ ಟ್ರಸ್ಟ್ ವತಿಯಿಂದ ಕೊಮ್ಮನಾಳು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಓದಿನಲ್ಲಿ ಏಕಾಗ್ರತೆ ಅತೀ ಮುಖ್ಯ, ಅದಿ ಹರೆಯದವರಲ್ಲಿ ಒಂಟಿತನ, ಮಾನಸಿಕ ಚಂಚಲತೆ ಹೆಚ್ಚಾಗಿರುತ್ತದೆ. ನಾವು ಯಾವಾಗಲೂ ಗುರಿಗಾಗಿ ಕೆಲಸ ಮಾಡಬೇಕು. ಪರಿಶ್ರಮವೂ ಕೂಡ ಸರಿಯಾದ ರೀತಿಯಲ್ಲಿ ಇದ್ದರೆ ಓದಿನಲ್ಲಿ ಪರಿಣಿತರಾಗಲು ಸಾಧ್ಯ ಎಂದರು.

ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡಿದ ಅವರು, ೩ತಿಂಗಳ ಮುಂಚೆಯೇ ತಯಾರಾಗಬೇಕು. ಪಾಠಗಳನ್ನು ಓದುವಾಗ ೩ರೀತಿಯ ವಿಭಾಗಗಳನ್ನು ಮಾಡಿಕೊಂಡು ಅದರಲ್ಲಿ ಸುಲಭವಾದದ್ದು, ಸ್ವಲ್ಪ ಕಷ್ಟ ವಾದದ್ದು, ಮತ್ತು ಅತೀ ಕಷ್ಟವಾದದ್ದು, ಈಗೆ ಮಾಡಿಕೊಂಡು ಬ್ಯಾಲೆನ್ಸ್ ಮಾಡಿ ಓದುವುದರಿಂದ ಪರೀಕ್ಷೆಯನ್ನು ಒತ್ತಡವಿಲ್ಲದೆ ಸುಲಭವಾಗಿ ಹೇಗೆ ಎದುರಿಸಬೇಕು ಎಂದು ತಿಳಿಸಿದರು.

ಅದಿ ಹರೆಯದವರಲ್ಲಿ ಮನಸ್ಸು ಆಕರ್ಷಿತವಾಗುವ ಮನೋಭಾವ ಇರುತ್ತದೆ. ಈ ಒಂದು ಅಮೂಲ್ಯವಾದ ಸಾಧಿಸುವ ಸಮಯದಲ್ಲಿ ಪ್ರೀತಿ, ಪ್ರೇಮ ಎಂಬ ಆಕರ್ಷಣೆಗೆ ತುತ್ತಾಗದೆ. ಮನಸ್ಸನ್ನು ಏಕಾಗ್ರತೆಗೊಳಿಸಿ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ತಾಲ್ಲೂಕಿನ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅನುಕೂಲ ವಾಗಲು ಉಚಿತವಾಗಿ ಮಾಹಿತಿ ಹಾಗೂ ಸಂವಾದ ನಡೆಸಿಕೊಡುತ್ತೇವೆ ಅದಕ್ಕಾಗಿ ಡಾ| ಕೆ.ಎಸ್. ಶುಭ್ರತಾ ಮೊ. ೯೪೪೮೧ ೪೯೯೨೭ರಲ್ಲಿ ಸಂಪರ್ಕಿಸಲು ತಿಳಿಸಿದ್ದಾರೆ.

ಕಾರ್‍ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯ ಕರಿಬಸಪ್ಪ, ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ| ಕೆ.ಆರ್. ಶ್ರೀಧರ್ ಇದ್ದರು. ಶಿಕ್ಷಕ ರಾಘವೇಂದ್ರ ಸ್ವಾಗತಿಸಿ, ಇಂದಿರಾ ವಂದಿಸಿದರು. ಕಿರಣ್, ಗಿರಿಧರ್, ವೀಣಾ ಎಸ್. ಯೋಗೇಶ್, ಶಿವಾನಿ, ಗುರುಪ್ರಸಾದ್ ಇನ್ನಿತರರಿದ್ದರು.

Abhi

Abhi

Leave a Reply

Your email address will not be published. Required fields are marked *