Flowers in Chania

ಹೊಸ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ ಮನವಿ

ಶಿವಮೊಗ್ಗ: ಹೊಸದಾಗಿ ಖರೀದಿಸಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ ಆಟೋ ಚಾಲಕರ ಸಂಘ ಹಾಗೂ ಮಾಲೀಕರ ಸಂಘದ ವತಿಯಿಂದ ಜಿಲಾ್ಲಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.

ಪಾ್ರದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹೊಸ ಆಟೋ ರಿಕ್ಷಾಗಳಿಗೆ ನೋಂದಣಿ ಮಾಡಿಕೊಡಲಾಗುತ್ತದೆ. ಆದರೆ ಅದನ್ನು ಓಡಿಸಲು ಪರವಾನಿಗೆ ನೀಡುವುದನ್ನು ನಿಲ್ಲಿಸಲಾಗಿದೆ. ಹೊಸದಾಗಿ ನೋಂದಣಿಯಾಗಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ಇರುವುದಿಲ್ಲ. ಇದರಿಂದ ಕಷ್ಟಪಟ್ಟು ಆಟೋ ರಿಕ್ಷಾ ಖರೀದಿ ಮಾಡಿದವರಿಗೆ ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಜೊತೆಗೆ ಸಾಲ ಮಾಡಿ ನಾವು ಆಟೋ ಖರೀದಿ ಮಾಡಿದ್ದೇವೆ. ಸುಮಾರು ಸಾವಿರಕಕ್ೂ ಹೆಚ್ಚು ಸಂಖ್ಯೆಯಲ್ಲಿ ಈ ರೀತಿಯ ಪರವಾನಿಗೆ ಇಲ್ಲದ ಆಟೋಗಳಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಾಲದ ಕಂತುಗಳನ್ನು ಕಟ್ಟಲು ನಮಗೆ ಕಷ್ಟವಾಗುತ್ತಿದೆ. ಪರವಾನಿಗೆ ಇಲ್ಲದೇ ಆಟೋ ಓಡಿಸುವುದೇ ಕೂಡ ತುಂಬಾ ಅಪಾಯಕಾರಿಯಾಗಿರುತ್ತದೆ. ಈ ಬಗ್ಗೆ ಹಲವು ಬಾರಿ ನಾವು ಮನವಿ ಮಾಡಿದ್ದರೂ ಸಾರಿಗೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ ಹೊಸದಾಗಿ ಖರೀದಿಸಿರುವ ಆಟೋ ಗಳಿಗೆ ಪರವಾನಿಗೆ ಕೊಡಬೇಕೆಂದು ಮನವಿ ಮಾಡಲಾಗಿದೆ.

ಈ ಬಗ್ಗೆ ಶಾಸಕರು ಕೂಡ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದಾ್ದರೆ. ಆದರೂ, ಪರವಾನಿಗೆ ನೀಡಿಲ್ಲ ಎಂದು ಆಟೋ ಚಾಲಕರು ದೂರಿದರು.

Abhi

Abhi

Leave a Reply

Your email address will not be published. Required fields are marked *