Flowers in Chania

ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ

ಶಿವಮೊಗ್ಗ :- ಶಿರಸಿ ಮಠ ದೇವಳದ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಫೆ. 22ರಂದು ಶಿಷ್ಯ ಸ್ವೀಕಾರ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ವಕೀಲ ಅಶೋಕ್ ಜಿ. ಭಟ್ ಹೇಳಿದರು.

ಅವರು ಇಂದು ಗುಂಡಪ್ಪಶೆಡ್‌ನಲ್ಲಿ ಇರುವ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾ ಮಠದಲ್ಲಿ ಆಯೋಜಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಫೆ. 18ರಿಂದ 22ರವರೆಗೆ ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ಹಲವು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯುತ್ತಿವೆ. ಮುಖ್ಯವಾಗಿ 22ರಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದರು.

ಶಿಷ್ಯ ಸ್ವೀಕಾರ ಎಂಬುವುದು ವಿಶಿಷ್ಠವಾದುದು, ಯಾವುದೇ ಸಂಸ್ಥಾನಗಳಲ್ಲಿ ಅಥವಾ ಮಠಗಳಲ್ಲಿ ತಮ್ಮ ಉತ್ತರಾಧಿಕಾರಿಗಳನ್ನು ನಿರ್ಧರಿಸಲು ಪೀಠಾಧಿಪತಿಗಳು ತೀರ್ಮಾನ ಮಾಡುತ್ತಾರೆ. ಇದೇ ರೀತಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ದಿವ್ಯ ಸಂಕಲ್ಪದಂತೆ ಮುಂದಿನ ಉತ್ತರಾಧಿಕಾರಿಳನ್ನಾಗಿ ಯಲ್ಲಾಪುರ ತಾಲ್ಲೂಕಿನ ಈರಾಪುರದ ವೇದ ಬ್ರಹ್ಮ ನಾಗರಾಜ ಭಟ್ಟ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಅವರ ನಂತರ ನಾಗರಾಜ ಭಟ್ಟರು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಗಳಾಗಿ ಮುಂದುವರೆಯುತ್ತಾರೆ ಎಂದರು.

೨೨ರಂದು ನಡೆಯುವ ಕಾರ್ಯಕ್ರಮದಲ್ಲಿ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ವಿರಚಿತ ಯೋಗ ವಾಸಿಷ್ಠ ಪ್ರಥಮ ಸಂಪುಟ ಕೂಡ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು ಉಪಸ್ಥಿತರಿರುತ್ತಾರೆ. ಹಾಗೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಇವರೊಂದಿಗೆ ಮಂತ್ರಿಗಳು ಜನಪ್ರತಿನಿಧಿಗಳು ವಿದ್ವಾಂಸರು ಮತ್ತು ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಲಕ್ಷ್ಮೀ ನಾರಾಯಣ ಜೋಷಿ, ಡಿ.ಎಂ. ಹೆಗಡೆ, ಡಾ. ಬಾಲಕೃಷ್ಣ ಹೆಗಡೆ, ದೇವೇಂದ್ರ ಭಟ್, ಪಿ.ಪಿ. ಹೆಗಡೆ, ಬಾಲಾಜಿ ದೇಶಪಾಂಡೆ, ಮೋಹನ್ ಹೆಗಡೆ ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *