Flowers in Chania

ಜಿಲ್ಲಾ ಬೇಡ ಜಂಗಮ ಸಂಘಟನೆಗಳ ಪಟ್ಟಿಗೆ ಅನುಮೋಧನೆ : ಪದಾಧಿಕಾರಿಗಳ ನೇಮಕ

ಶಿವಮೊಗ್ಗ :- ಜಿಲ್ಲಾ ಬೇಡ ಜಂಗಮ ಸಂಘಟನೆಗಳ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ಸಿಕ್ಕಿದ್ದು, ಗೌರವ ಅಧ್ಯಕ್ಷರಾಗಿ ಟಿ.ಬಿ. ಸೋಮಶೇಖರಯ್ಯ, ಕಾರ್ಯದರ್ಶಿಯಾಗಿ ಹೆಚ್.ಎಂ.ಲೋಕೇಶ್ ಅವರು ನೇಮಕಗೊಂಡಿದ್ದಾರೆ ಎಂದು ಅಧ್ಯಕ್ಷ ಕೆ.ಆರ್. ಸೋಮನಾಥ್ ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಉಪಾಧ್ಯಕ್ಷರುಗಳಾಗಿ ಪ್ರೇಮವೀರಯ್ಯ, ಎಸ್. ಅಡವೀಶಯ್ಯ, ಸಿ.ಎಸ್.ಲಿಂಗರಾಜ್, ಖಜಂಚಿಯಾಗಿ ಎಸ್.ಬಸಯ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ವಿ.ಹೆಚ್.ಮಹೇಶ್ವರಯ್ಯ, ನಾಗರಾಜ ಸ್ವಾಮಿ, ಹಾಲಸ್ವಾಮಿ ತಿಮ್ಲಪುರ, ಉಮೇಶ್ ಹಿರೇಮಠ್, ಕಾನೂನು ಸಲಹೆಗಾರರಾಗಿ ವಕೀಲ ವಾಗೀಶ್, ನಿರ್ದೇಶಕರುಗಳಾಗಿ ಸೋಮಶೇಖರಯ್ಯ, ತೇಜಸ್ವಿನಿ, ಕೆ.ಎಂ. ರೇಖಾ, ಹೆಚ್.ಬಿ.ಮಹೇಶ್, ನೇತ್ರಾವತಿ, ಎಂ.ವಿ. ಸುನಂದಾ, ಕುಮಾರಸ್ವಾಮಿ, ವೀರಸಂಗಯ್ಯ, ಜ್ಯೋತಿನಾಗರಾಜಯ್ಯ, ಸುಜತ ನಾಗರಾಜ್‌ಶಾಸ್ತ್ರಿ, ರೇಣುಕಮ್ಮ ಆಯ್ಕೆಯಾಗಿದ್ದಾರೆ ಎಂದರು.

ಗೌರವಾಧ್ಯಕ್ಷ ಟಿ.ಬಿ. ಸೋಮಶೇಖರಯ್ಯ ಮಾತನಾಡಿ, ಇತ್ತೀಚೆಗೆ ನಡೆದ ರಾಷ್ಟ್ರೀಯ ಬೇಡ ಜಂಗಮ ಒಕ್ಕೂಟದ ಆಯ್ಕೆ ಸಭೆಯಲ್ಲಿ ಹಾಗೂ ರಾಷ್ಟ್ರೀಯ ಒಕ್ಕೂಟದ ತೀರ್ಮಾನದಂತೆ ಮತ್ತು ರಾಷ್ಟ್ರೀಯ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ನಿಯಮ, ನಿಬಂಧನೆಗಳ ಅನ್ವಯ ಜರಿಗೆ ಬರುವಂತೆ ಜಿಲ್ಲಾ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ದೊರೆತಿದೆ ಎಂದರು.

ಬೇಡರ ಜಂಗಮ ಸಮಾಜವನ್ನು ಪರಿಶಿಷ್ಟ ಜತಿಗೆ ಸೇರಿಸಿ ಪ್ರಮಾಣ ಪತ್ರ ನೀಡುವಂತೆ ಕಳೆದ ೨೦ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದು, ಕೇಂದ್ರ ಸರ್ಕಾರ ಈಗಾಗಲೇ ನಮ್ಮ ಸಮಾಜವನ್ನು ಪರಿಶಿಷ್ಟಜತಿಗೆ ಸೇರಿಸಿದ್ದು, ನ್ಯಾಯಾಲಯದ ಆದೇಶವಿದ್ದರು ಸಹ ಕರ್ನಾಟಕ ರಾಜ್ಯ ಸರ್ಕಾರ ಎಸ್ಸಿ ಪ್ರಮಾಣ ಪತ್ರ ನೀಡಲು ತಡ ಮಾಡುತ್ತಿದೆ. ಬೇರೆ ರಾಜ್ಯಗಳಲ್ಲಿ ಈಗಾಗಲೇ ನಮ್ಮ ಸಮಾಜಕ್ಕೆ ಎಸ್ಸಿ ಮೀಸಲಾತಿ ನೀಡಿದ್ದು, ರಾಜ್ಯ ಸರ್ಕಾರ ಮೀಸಲಾತಿ ನೀಡಲು ತಾರತಮ್ಯ ಎಸಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೀಸಲಾತಿ ನೀಡುವ ಭರವಸೆ ನೀಡಿದ್ದು, ಅದರಂತೆ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರೇಮ ವೀರಯ್ಯ, ಎಸ್. ಬಸಯ್ಯ, ಉಮೇಶ್ ಹಿರೇಮಠ್, ತೇಜಸ್ವಿನಿ, ಎಂ.ವಿ.ಸುನಂದ, ಜ್ಯೋತಿ ನಾಗರಾಜಯ್ಯ ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *