Flowers in Chania

ಜ. 14ರ ನಾಳೆ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಉತ್ಸವಕ್ಕೆ ಸಿದ್ಧತೆ

ಶಿವಮೊಗ್ಗ :- ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಧಾರ್ಮಿಕ ದತ್ತಿ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜ. 14ರ ಭಾನುವಾರದಂದು ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಣದ ವರ್ಧಂತ್ಯೋತ್ಸವ ಸಮಾರಂಭ ನಡೆಯಲಿದೆ.

ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾಂತಕಾಲದಿಂದ ಶ್ರೀ ಸನ್ನಿಧಾನದಲ್ಲಿ ಶ್ರೀ ಗಣಪತಿ ಪೂಜೆಯೊಂದಿಗೆ ಹೋಮ, ಹವನ, ಕಲಶ ಸ್ಥಾಪನೆಯೊಂದಿಗೆ ಮಕರ ಸಂಕ್ರಾಂತಿ ಉತ್ಸವ ಮತ್ತು ವಿದ್ಯಾವಾಚಸ್ಪತಿ ಶ್ರೀ ಡಾ. ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳವರ ಪೀಠಾರೋಹಣದ ವರ್ಧಂತ್ಯೋತ್ಸವ ನಡೆಯಲಿದೆ. ಬೆಳಿಗ್ಗೆ 6ಕ್ಕೆ ಪ್ರಾರ್ಥನೆ, ಧರ್ಮಶಾಸ್ತನ ಅನುe, ಮಹಾಗಣಪತಿ ಪೂಜೆ, ಪುಣ್ಯಹ, ದೇವಾನಾಂಧಿ,ಋತ್ವಿಗ್ವರಣೆ, , ಮಹಾಗಣಪತಿ ಹೋಮ, ನವಗ್ರಹ ಸಹಿತ ದುರ್ಗ ಹೋಮ, ಅಷ್ಟೋತ್ತರ ಶತಕುಂಭ ಕಲಶಸ್ಥಾಪನೆ, ೯ಕ್ಕೆ ಹರಕೆ ತುಲಾಭಾರ ಸೇವೆ, ೧೦ಕ್ಕೆ ಬ್ರಹ್ಮಕಲಶ ಸ್ಥಾಪನೆ, 10.30ಕ್ಕೆ ಕ್ಷೇತ್ರ ಗಣಗಳ ದೈವದರ್ಶನ ದೇವರ ಬೀಡಿಗೆ ಆಗಮನ, 1ಕ್ಕೆ ಬೀಡಿನಲ್ಲಿ ಶ್ರೀ ಆಭರಣ ಮತ್ತು ಆಯುಧಗಳ ಮಹಾಪೂಜೆ, 11.15ಕ್ಕೆ ಉತ್ಸವಮೂರ್ತಿಗೆ ಮಹಾಮಂಗಳರಾತಿ, ೧೧.೩೦ಕ್ಕೆ ಶ್ರೀಗಳಿಂದ ರಾಜಪಲಕ್ಕಿಯಲ್ಲಿ ಸ್ವಾಮಿಯ ಪಾದುಕೆ ಪೂಜೆ, 1.45ಕ್ಕೆ ಆಭರಣೋತ್ಸವ ಮತ್ತು ಪರಿವಾರ ದೈವಗಳೊಂದಿಗೆ ಸಂವಿಧಾನಕ್ಕೆ ಭವ್ಯ ಮೆರವಣಿಗೆ, 1ಕ್ಕೆ ಅಯ್ಯಪ್ಪ ಸ್ವಾಮಿಯ ಉಯ್ಯಾಲೆ ಸೇವೆ, 1.15ಕ್ಕೆ ಕನಕಾಭಿಷೇಕ, 1.45ಕ್ಕೆ ಮಹಾಮಂಗಳರಾತಿ ನಡೆಯಲಿದೆ.

ವಿಶೇಷ ಕಾರ್ಯಕ್ರಮಗಳು: 11ಕ್ಕೆ ಶ್ರೀಪೀಠದ ದರ್ಭಾರು, ದಿವ್ಯಸಾನಿಧ್ಯ ಅನಂತಶ್ರೀ ವಿಭೂಷಿತ ಶಿವಸುಜನ ತೀರ್ಥ ಮಹಾಸ್ವಾಮಿಗಳು, ಶ್ರೀ ದತ್ತಾತ್ರೆಯ ವಿಷ್ಣುರಾವ್ ಶಿಂತ್ರೆ ಗುರುಸ್ವಾಮಿಗಳು, ಮಧ್ಯಾಹ್ನ 2ಕ್ಕೆ ಮೆಕ್ಕೆಕಟ್ಟು ಮೇಳದವರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ಯಕ್ಷಗಾನ, ಸಂಜೆ 6.30ಕ್ಕೆ ಜ್ಯೋತಿ ಪೂಜೆ, 7ಕ್ಕೆ ಅಡ್ಡಪಲ್ಲಕ್ಕಿ ಉತ್ಸವ, 7.30ಕ್ಕೆ ಪೊಲೀಸ್ ಪೂಜೆ, 8.30ಕ್ಕೆ ಹರಿವರಾವಸನಂ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಧಿಗಳು ಎಂದಿನಂತೆ ಆಗಮಿಸಿ ಪಾಲ್ಗೊಳ್ಳಬೇಕು ಎಂದು ದೇವಳದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Abhi

Abhi

Leave a Reply

Your email address will not be published. Required fields are marked *