Flowers in Chania

ಸೆ. 9ರಂದು ಅನ್ವೇಷಣಾ ಇನ್ನೀವೇಷನ್‌ ಎಂಟ್ರೆಪ್ರೆನ್ಯೂರಿಯಲ್‌ ಫೋರಂ ಉದಾ್ಘಟನೆ

ಶಿವಮೊಗ್ಗ: ಮಲೆನಾಡು ಪ್ರದೇಶ ದಲ್ಲಿ ಉದ್ಯಮಶೀಲತೆ ಹಾಗೂ ನಾವೀನ್ಯತೆಗೆ ಹೊಸ ಉತ್ತೇಜನ ನೀಡುವ ದೃಷ್ಟಿಯಿಂದ ಸಾಗರ ರಸ್ತೆಯ ಪಿಇಎಸ್‌ ಕಾ್ಯಂಪಸ್‌ನಲ್ಲಿ ಸೆ.9ರ ಬೆಳಿಗ್ಗೆ 10 ಗಂಟೆಗೆ ಅನ್ವೇಷಣಾ ಇನ್ನೀವೇಶನ್‌ ಮತ್ತು ಎಂಟ್ರೆ ಪ್ರೆನ್ಯೂರಿಯಲ್‌ ಫೋರಂ ಉದಾ್ಘಟನೆ ಗೊಳ್ಳಲಿದೆ ಎಂದು ಪಿಇಎಸ್‌ ಟ್ರಸ್‌‌ಟನ ಮಾ್ಯನೇಜಿಂಗ್‌ ಟ್ರಸ್ಟಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಶಿವಮೊಗ್ಗದಲ್ಲಿ ಉದ್ಯಮ ಶೀಲತೆಯ ದಿಗಂತದಲ್ಲಿ ಭರವಸೆಯ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿ ರುವ ಈ ಹೊತ್ತಿನಲ್ಲಿ ಅನ್ವೇಷಣವು ಅಭಿವೃದ್ಧಿ ಹೊಂದುತ್ತಿರುವ ಸಾ್ಟರ್ಟ್‌ ಅಪ್‌ ಸಂಸ್ಕೃತಿಯನ್ನು ಬೆಳೆಸುವ ಕಡೆಗೆ ತನ್ನ ಆರಂಭಿಕ ಹೆಜ್ಜೆ ಇಡುತ್ತಿದೆ. ಅನ್ವೇಷಣಾ ಫೋರಂ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಅವರು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ನೆರವಾಗಲು ಅಗತ್ಯ ಬೆಂಬಲ ನೀಡುತ್ತದೆ ಎಂದರು.

ಹೊಸ ಉದ್ಯೀಗ ಅವಕಾಶ ಸೃಷ್ಟಿಸುವುದು. ಸಮಸ್ಯೆಗಳಿಗೆ ನವೀನ ಪರಿಹಾರ ಒದಗಿಸುವುದು ಮತ್ತು ತಂತ್ರಜಾ್ಞನದ ಲಾಭವನ್ನು ಎಲ್ಲರೂ ಪಡೆಯುವಂತೆ ಮಾಡುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಅನ್ವೇಷಣಾ ಲಾಭದ ಉದ್ದೇಶವಿಲ್ಲದ ತಂತ್ರಜಾ್ಞನ, ವಾ್ಯಪಾರದ ಇನಕ್‌ಯು ಬೇಟರ್‌ ಸಂಸ್ಥೆಯಾಗಿದ್ದು, ಮಲೆ ನಾಡು ಭಾಗದಲ್ಲಿ ವಾಣಿಜ್ಯೀದ್ಯಮ ಪೋಷಿಸಲು ನೆರವಾಗಲಿದೆ. ಹೊಸ ದಾಗಿ ಉದ್ಯಮ ಕ್ಷೇತ್ರಕಕ್ೆ ಪಾದಾರ್ಪಣೆ ಮಾಡುವವರಿಗೆ ಹೊಸ ಶಕ್ತಿ ಮತ್ತು ಭರವಸೆ ತುಂಬಲಿದೆ ಎಂದರು.

ಅನ್ವೇಷಣಾ ಇನ್ನೀವೇಶನ್‌ ಮತ್ತು ಎಂಟ್ರೆಪ್ರೆನ್ಯೂರಿಯಲ್‌ ಫೋರಂನ ಮಾ್ಯನೇಜಿಂಗ್‌ ಡೈರೆಕ್ಟರ್‌ ಸಿ.ಎಂ. ಪಾಟೀಲ್‌ ಮಾತನಾಡಿ, ಅನ್ವೇಷಣಾ ಸಂಸ್ಥೆಯು ಇನಕ್‌ಯುಬೇಷನ್‌ ಸೆಂಟರ್‌ ಆಗಿದ್ದು, ಸಾ್ಟರ್ಟ್‌ಅಪ್‌ಗಳು ಅಭಿವೃದ್ಧಿ ಹೊಂದಲು ಸೂಕ್ತವಾದ ವಾತಾವರಣ ನೀಡುತ್ತದೆ ಎಂದರು.

ಉದಾ್ಘಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಬೆಳಗಾವಿಯ ವಿಟಿಯು ಕುಲಪತಿ ಡಾ. ವಿದಾ್ಯಶಂಕರ್‌, ರಾಜ್ಯ ಸರ್ಕಾರದ ಮಿಷನ್‌ ಗ್ರೂಪ್‌ ಆನ್‌ ಸಾ್ಟರ್ಟ್‌ ಅಪ್‌ನ ಅಧ್ಯಕ್ಷ ಪ್ರಶಾಂತ್‌ಪ್ರಕಾಶ್‌, ಪಿಇಎಸ್‌ ಟ್ರಸ್‌‌ಟನ ಮಾ್ಯನೇಜಿಂಗ್‌ ಟ್ರಸ್ಟಿ ಬಿ.ವೈ. ರಾಘವೇಂದ್ರ, ಖಜಾಂಚಿ ಬಿ.ವೈ. ವಿಜಯೇಂದ್ರ ಹಾಗೂ ಇನ್ನಿತರರು ಭಾಗವಹಿಸಲಿದಾ್ದರೆ.

ಫೋರಂನ ಡೈರೆಕ್ಟರ್‌ ಬಿ.ಆರ್‌. ಸುಭಾಶ್‌, ಪಿಇಎಸ್‌ ಟ್ರಸ್‌‌ಟನ ಆಡಳಿತ ಮುಖ್ಯ ಸಂಯೋಜಕ ಡಾ.ಆರ್‌. ನಾಗರಾಜ್‌ ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *